ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಪ್ರಸಿದ್ದ ಏಕಶಿಲಾ ನಂದಿ ವಿಗ್ರಹದಲ್ಲಿ ಬಿರುಕು..

ಮೈಸೂರು,ಜೂ,15,2019(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಪ್ರಸಿದ್ದ ಏಕಶಿಲಾ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ.

ನಂದಿ ವಿಗ್ರಹ ಸುಮಾರು 400 ವರ್ಷಗಳ ಹಳೆಯ ವಿಗ್ರಹವಾಗಿದ್ದು 1659-73 ರಲ್ಲಿ ನಿರ್ಮಾಣ ಗೊಂಡಿತ್ತು. ಚಾಮುಂಡಿ ಬೆಟ್ಟದ ಮೇನ್ ಅಟ್ರ್ಯಾಕ್ಷನ್  ಆಗಿರುವ ಈ ನಂದಿ ವಿಗ್ರಹ ವರ್ಷಕ್ಕೆ ಎರಡು ಬಾರಿ ಮಹಾ ಮಜ್ಜನ ನಡೆಯೋ ಪುಣ್ಯ ಸ್ಥಳವಾಗಿದೆ. ಇದೀಗ ನಂದಿ ವಿಗ್ರಹದ ಕಾಲಿನ ಭಾಗದಲ್ಲಿ ಬಿರುಕು ಬಿಟ್ಟದೆ.

ಕಪ್ಪಾಗಿದ್ದ ನಂದಿ ವಿಗ್ರಹವನ್ನ ಪಾಲಿಶ್ ಮಾಡಿಸಿ ಕಳೆದ ವರ್ಷ  ಹೊಸ ರೂಪ ಕೊಡಲಾಗಿತ್ತು. ಈ ಮೂಲಕ ಕಪ್ಪಾಗಿದ್ದ ವಿಗ್ರಹ ಬಿಳಿಯಾಗಿ ಪರಿವರ್ತನೆ ಮಾಡಲಾಗಿತ್ತು. ಇದರಿಂದಲೇ ಕೆಮಿಕಲ್ ಎಫೆಕ್ಟ್ ಎಂದು ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾಗಿ ನಂದಿ ವಿಗ್ರಹವನ್ನ ಪೋಷಣೆ ಮಾಡಿಲ್ಲ. ಹೀಗಾಗಿ ಇದೀಗ ನಂದಿಯ ಕಾಲಿ‌ನ ಬಿರುಕು ಬಿಟ್ಟು ಅವಾಂತರವಾಗಿದೆ ಎಂದು ಕಿಡಿಕಾರಿದ್ದಾರೆ .

ಇನ್ನು ನಂದಿ ವಿಗ್ರಹ ಕಾಲಿನಲ್ಲಿ ಬಿರುಕು ಬಿಟ್ಟರೂ ಈವರೆಗೆ  ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಚಾಮುಂಡಿ ಬೆಟ್ಟದ ಆಡಳಿತ ಮಂಡಳಿಯು ಕೂಡ ಈ ವಿಚಾರದಲ್ಲಿ ಗಪ್ ಚುಪ್ ಆಗಿದೆ. ಆದರೆ ಭಗ್ನಗೊಂಡ ವಿಗ್ರಹಕ್ಕೆ ಭಕ್ತರು ನಿತ್ಯವೂ ಪೂಜೆ ಸಲ್ಲಿಸುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಚಾಮುಂಡಿ ದೇವಿಯ ದರ್ಶ‌ನ ಪಡೆದು ಬಳಿಕ ನಂದಿ ದರುಶನ ಪಡೆಯುತ್ತಿದ್ದಾರೆ.

ಅದ್ದರಿಂದ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬಿರುಕು ಬಿಟ್ಟಿರುವುದನ್ನ ದುರಸ್ತಿ ಮಾಡಿಸಲು ಮುಂದಾಗಬೇಕೆಂಬುದು ಎಲ್ಲರ ಆಗ್ರಹವಾಗಿದೆ.

Key words: Cracks in the famous monolithic Nandi statue in the Chamundi Hills of Mysore

#Mysore #ChamundiHills #Cracks #famous #monolithic #Nandistatue