Saturday, August 8, 2026

BDA Apartments

Home Front Page ಸಿಪಿವೈ ನಮ್ಮ ಪಕ್ಷಕ್ಕೆ ಬಂದಿದ್ದು ಸಂತೋಷ: ಮೂರು ಕ್ಷೇತ್ರದಲ್ಲೂ ನಮ್ಮದೇ ಗೆಲುವು- ಸಚಿವ ಹೆಚ್.ಸಿ ಮಹದೇವಪ್ಪ

ಸಿಪಿವೈ ನಮ್ಮ ಪಕ್ಷಕ್ಕೆ ಬಂದಿದ್ದು ಸಂತೋಷ: ಮೂರು ಕ್ಷೇತ್ರದಲ್ಲೂ ನಮ್ಮದೇ ಗೆಲುವು- ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಅಕ್ಟೋಬರ್,23,2024 (www.justkannada.in): ಸಿಪಿ ಯೋಗೇಶ್ವರ್ ನಮ್ಮ‌ಪಕ್ಷಕ್ಕೆ ಬಂದಿರುವುದು ಸಂತೋಷದ ವಿಚಾರ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದುಮಾತನಾಡಿದ ಸಚಿವ ಡಾ. ಎಚ್‌ ಸಿ ಮಹದೇವಪ್ಪ, ಚನ್ನಪಟ್ಟಣಕ್ಕೆ ನಮ್ಮ ಪಕ್ಷದಲ್ಲೂ ಬಹಳಷ್ಟು ಜನ ಅಭ್ಯರ್ಥಿಗಳಿದ್ದರು. ಆದರೂ ಬೇರೆ ಪಕ್ಷದಿಂದ ಬಂದ ಅಭ್ಯರ್ಥಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ ಎಂದರೇ ಪಕ್ಷದ ಉದ್ದಾರತನ ಎಂತಹದ್ದು ಎಂಬುದನ್ನ ಗಮನಿಸಿ. ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ ಎಂದರು.

ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಕೆಲವು ಕಾರ್ಯಗಳು ಮುಡಾದಲ್ಲಿ ಸ್ಥಗಿತಗೊಂಡಿವೆ. ಅವುಗಳನ್ನ ಶುರು ಮಾಡಿ ಎಂದು ಡಿಸಿಗೆ ಹೇಳಿದ್ದೇನೆ. ದಸರಾ ಮುಗಿದಿದೆ, ಇನ್ನೂ ಆಡಳಿತ ಕಾರ್ಯಗಳು ಚುರುಕುಗೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದು ತಿಳಿಸಿದರು.

Key words: CP yogeshwar, join, congress, Minister, HC Mahadevappa