ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಕೋವಿಡ್‌ ನ ಹೊಸ ತಳಿ ‘ಓಮಿಕ್ರಾನ್’

ಬೆಂಗಳೂರು, ನವೆಂಬರ್ 27, 2021 (www.justkannada.in): ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಂಡು ಬಂದಿರುವ ಕೋವಿಡ್-19 ಸಾಂಕ್ರಾಮಿಕದ ಹೊಸ ತಳಿ ಬಿ.೧.೧.೫೨೯ ಅನ್ನು ವಿಶ್ವ ಆರೋಗ್ಯ ಸಂಸ್ಥೆ ‘ಓಮಿಕ್ರಾನ್’ ಎಂದು ಹೆಸರಿಸಿದ್ದು, ಈ ಹೊಸ ತಳಿ ವಿಶ್ವಕ್ಕೆ ಹೊಸ ಸಂಕಟವನ್ನು ತಂದೊಡ್ಡಿದೆ ಎಂದು ತಿಳಿಸಿದೆ.

ಸರ್ಸ್ಮ-ಕೋವ್-೨ ಅನ್ನು ಕಾಲಕಾಲಕ್ಕೆ ನಿಗಾವಹಿಸುವ ಹಾಗೂ ಅದರ ವಿಕಾಸವನ್ನು ಮೌಲ್ಯಮಾಪನ ಮಾಡುವಂತಹ ತಜ್ಞರ ಸ್ವತಂತ್ರ ಸಮೂಹ ಸರ್ಸ್ಸ-ಕೋವ್-೨ ವೈರಸ್ ಎವಲ್ಯೂಷನ್ (ಟಿಎಜಿ-ವಿಇ) ಬಿ.೧.೧.೫೨೯ ತಳಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲು ಶುಕ್ರವಾರದಂದು ಸಭೆ ಏರ್ಪಡಿಸಿದ್ದು, ನವೆಂಬರ್ ೨೪ರಂದು ದಕ್ಷಿಣ ಆಫ್ರಿಕಾದಲ್ಲಿ ಈ ಹೊಸ ತಳಿ ಹುಟ್ಟಿಕೊಂಡಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ಒದಿಗಿಸಿದೆ.

ದೀರ್ಘ ಅಧ್ಯಯನದ ನಂತರ ಟಿಎಜಿ-ವಿಇ, ಈ ತಳಿ ಇಡೀ ಜಗತ್ತಿಗೆ ಹೊಸ ಸಂಕಟವನ್ನು ಒಡ್ಡಬಹುದು ಎಂದು ತಿಳಿಸಿದೆ. ಈ ಸಂಬಂಧ ಸರ್ಸ್ ಕೋವಿಡ್‌ನ ತಳಿಗಳ ಪ್ರಸಾರದ ಕುರಿತು ಹೆಚ್ಚಿನ ಪ್ರಯತ್ನಗಳನ್ನು ಮಾಡುವಂತೆ ಡಬ್ಯೂಹೆಚ್‌ಒ ರಾಷ್ಟ್ರಗಳನ್ನು ಕೋರಿದೆ.

“ದಕ್ಷಿಣ ಆಫ್ರಿಕಾದಲ್ಲಿನ ಈ ಸಾಂಕ್ರಾಮಿಕದ ಸ್ಥಿತಿಯನ್ನು ಮೂರು ಗಂಭೀರ ಹಂತಗಳಲ್ಲಿ ಗುರುತಿಸಲಾಗಿದ್ದು, ಇತ್ತೀಚಿನ ಇಂತಹ ಒಂದು ಗಂಭೀರ ಪರಿಸ್ಥಿತಿ ಡೆಲ್ಟಾ ತಳಿಯದ್ದಾಗಿತ್ತು. ಇತ್ತೀಚಿನ ವಾರಗಳಲ್ಲಿ ಅಲ್ಲಿ ಸೋಂಕಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಬಿ.೧.೧.೫೨೯ ತಳಿಯನ್ನು ಪತ್ತೆ ಹಚ್ಚಲಾಗಿದೆ. ಈ ಹೊಸ ತಳಿಯ ಸೋಂಕನ್ನು ನವೆಂಬರ್ ೯ ರಂದು ಮೊದಲಿಗೆ ಗುರುತಿಸಲಾಯಿತು,” ಎಂದ ಡಬ್ಯೂಹೆಚ್‌ಒ ಮಾಹಿತಿ ನೀಡಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Covid’s -new breed- Omicron- found -South Africa