ಪ್ರತಿನಿತ್ಯ 3 ಲಕ್ಷ ಜನರಿಗೆ ಕೋವಿಡ್ ಲಸಿಕೆ: 3ನೇ ಅಲೆ ಎದುರಿಸಲು ಸರ್ಕಾರ ಸಿದ್ಧ- ಸಿಎಂ ಬಿಎಸ್ ಯಡಿಯೂರಪ್ಪ.

ಬೆಂಗಳೂರು,ಜುಲೈ3,2021(www.justkannada.in): ಪ್ರತಿನಿತ್ಯ 3 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. 3ನೇ ಅಲೆ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.jk

ಜಯನಗರದಲ್ಲಿ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕೋವಿಡ್ ಸೃಷ್ಟಿಸಿದ ಸಮಸ್ಯೆಯಿಂದ ಜನರು ಕಷ್ಟಕ್ಕೀಡಾದ್ರು.  ಅಂತವರಿಗೆ ಸರ್ಕಾರ ನೆರವು ನೀಡಿದೆ. ಕಲಾವಿದರು ಸೇರಿ ಹಲವು ವರ್ಗಗಳಿಗೆ ನೆರವು ನಿಡಲಾಗಿದೆ. ಡಿಬಿಟಿ ಮೂಲಕ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದರು.

ಕೋವಿಡ್ ತಡೆಗೆ ವೈದ್ಯಕೀಯ ಮೂಲಸೌಲಭ್ಯಗಳ ಹೆಚ್ಚಳ ಮಾಡಲಾಗಿದೆ. ಕೋವಿಡ್ ನಿರ್ವಹಣೆಗೆ ಹಲವು ಸಂಘಸಂಸ್ಥೆಗಳು ನೆರವು ನೀಡಿದ್ದು, ಕೋವಿಡ್ ಪ್ರತಿನಿತ್ಯ 3 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. 3ನೇ ಅಲೆಯನ್ನ ತಡೆಯಲು ಸರ್ಕಾರ ಸರ್ವಸನ್ನದ್ಧವಾಗಿದೆ. ಇನ್ನು  ಪ್ರತಿಯೊಬ್ಬರು ಕೋವಿಡ್ ನಿಯಮ ಪಾಲಿಸಬೇಕು ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words:  Covid vaccine -3 lakh people- Ready – face -3rd wave-CM BS Yeddyurappa.