ಕೋವಿಡ್ ಹಿನ್ನೆಲೆ: ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ನಾಳೆ ತೀರ್ಮಾನ- ಸಚಿವ ಆರ್.ಅಶೋಕ್.

ಬೆಂಗಳೂರು,ಜನವರಿ,20,2020(www.justkannada.in): ಕೋವಿಡ್ ನಿರ್ವಹಣೆ ಹೊಸ ಗೈಡ್ ಲೈನ್ ಸಂಬಂಧ ನಾಳೆ ಸಿಎಂ ನೇತೃತ್ವದಲ್ಲಿ  ಸಭೆ ನಡೆಯಲಿದ್ದು  ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ನಾಳೆ  ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ನಾಳೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಧ್ಯಾಹ್ನ 1ಗಂಟೆಗೆ ಸಭೆ ನಡೆಯಲಿದ್ದು,  ಮಧ್ಯಾಹ್ನ 2 ಗಂಟೆ ವೇಳೆಗೆ ಸ್ಪಷ್ಟ  ಮಾಹಿತಿ ಸಿಗಲಿದೆ. ತಜ್ಞರು ಕೆಲ ಸಚಿವರು ನಾಳಿನ ಸಭೆಯಲ್ಲಿ ಭಾಗಿಯಾಗುತ್ತಾರೆ.  ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ತೆಗೆಯುವಂತೆ ಕೆಲ ಕಾಂಗ್ರೆಸ್ ನಾಯಕರು ನಮಗೆ ಸಲಹೆ ನೀಡಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಶಾಲೆ ಮುಚ್ಚುವಂತೆ ಸಲಹೆ ನೀಡಿದ್ದಾರೆ.  ಕೇಂಧ್ರ ಸರ್ಕಾರದ ಸಲಹೆ ತಜ್ಞರು ನೀಡಿರುವ ಸಲಹೆ ನಾಯಕರು ನೀಡಿರುವ ಸಲಹೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಅಮೇರಿಕಾದಲ್ಲಿ ಹೇಳೋರು ಕೇಳೋರು ಯಾರು ಇಲ್ಲ ಹೀಗಾಗಿ ಅಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿವೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ರಾಜ್ಯದಲ್ಲಿ ಅಂತಹ ಯಾವುದೇ ಘಟನೆ ನಡೆಯಬಾರದು.  ಬ್ಯುಸಿನೆಸ್ ಒಂದೇ ವಿಚಾರ ಮುಂದಿಟ್ಟುಕೊಂಡು ತೀರ್ಮಾನಿಸಲ್ಲ ಎಲ್ಲಾ ವಿಚಾರ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ ಎಂದರು.

Key words: Covid rule- decision – tomorrow -Minister -R. Ashok.