Tuesday, September 22, 2026

BDA Apartments

ಕಿರಿಕ್ ಬೆಡಗಿ ರಶ್ಮಿಕಾ ಮಂದಣ‍್ಣ ಈಗ ನ್ಯಾಷನಲ್ ಕ್ರಷ್ ! BDA JK_Adv BDA Adv
Home Front Page ಮೈಸೂರಿನ ಟ್ರಾಮ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತ ಆತ್ಮಹತ್ಯೆ

ಮೈಸೂರಿನ ಟ್ರಾಮ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತ ಆತ್ಮಹತ್ಯೆ

ಬೆಂಗಳೂರು, ಮೇ 09, 2021 (www.justkannada.in): ಮೈಸೂರಿನ ಟ್ರಾಮ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲೇ ನೇಣುಗೆ ಶರಣಾಗಿದ್ದಾರೆ.

ಮೈಸೂರಿನ ತನ್ವಿರ್ ಸೇಠ್ ನಗರದ ನಿವಾಸಿ ದೇವರಾಜು ಮೃತರು. ಆಕ್ಸಿಜನ್ ವೈರ್’ನಿಂದಲೇ ನೇಣು ಹಾಕಿಕೊಂಡ ಕೋವಿಡ್ ಸೋಂಕಿತ. ಮೈಸೂರಿನ ಟ್ರಾಮ ಕೇರ್ ಸೆಂಟರ್ ನಲ್ಲಿ ಘಟನೆ.

ಇಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾದ ಸೋಂಕಿತ ದೇವರಾಜ. ಆಕ್ಸಿಜನ್ ಪಡೆಯುತ್ತಿದ್ದ ಪೈಪ್ ನಿಂದ ಶೌಚಾಲಯದ ಕಿಟಕಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಕೋವಿಡ್ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತ.