ಕೋವಿಡ್ ಮಾರ್ಗಸೂಚಿ: ಬೆಳಗಿನ ಅವಧಿಯಲ್ಲಿ ಮಾತ್ರ ಶಿರಡಿ ಸಾಯಿಬಾಬಾ ದರ್ಶನ

ಬೆಂಗಳೂರು, ಡಿಸೆಂಬರ್ 26, 2021 (www.justkannada.in): ಒಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಶಿರಡಿ ಸಾಯಿಬಾಬಾ ದೇವಾಲಯವನ್ನು ರಾತ್ರಿ ವೇಳೆ ಮುಚ್ಚಲು ನಿರ್ಧರಿಸಿದೆ.

ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ದೇಗುಲ ಮುಚ್ಚಿರುತ್ತದೆ. ಹಗಲಿನ ವೇಳೆಯಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಮಾತ್ರ ತೆರೆದಿರುತ್ತದೆ.

ಸಂಜೆ 4 ಮತ್ತು ರಾತ್ರಿ 10 ಗಂಟೆಗೆ ನಡೆಯುವ ವಿಶೇಷ ಪ್ರಾರ್ಥನೆಯನ್ನು ದೇವಾಲಯದ ಅರ್ಚಕರ ಸಮ್ಮುಖದಲ್ಲಿ ಮಾತ್ರ ಮಾಡಲಾಗುವುದು. ಈ ವೇಳೆ ಭಕ್ತರಿಗೆ ಅವಕಾಶ ಇರುವುದಿಲ್ಲ.

ರಾತ್ರಿ 9 ಗಂಟೆಯ ನಂತರ ದೇವಾಲಯವನ್ನು ಮುಚ್ಚುವುದರಿಂದ ದೇವಾಲಯದ ‘ಪ್ರಸಾದಾಲಯ’ವೂ ಮುಚ್ಚಲ್ಪಡುತ್ತದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.