ಕೋವಿಡ್ ನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಸ್ಥರಿಗೆ ಪರಿಹಾರ: ಆರ್ಥಿಕ ಇಲಾಖೆಗೆ ಪ್ರಸ್ತಾವನೆ-ಡಿಸಿಎಂ ಲಕ್ಷ್ಮಣ್ ಸವದಿ…

ಬೆಳಗಾವಿ,ಅಕ್ಟೋಬರ್,14,2020(www.justkannada.in): ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ನೀಡುವ ವಿಚಾರ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ  ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.jk-logo-justkannada-logo

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಕೋವಿಡ್ ನಿಂದ 50 ಸಾರಿಗೆ ನೌಕರರು ಮೃತಪಟ್ಟಿದ್ದಾರೆ.  ಮೃತಪಟ್ಟ ಸಾರಿಗೆ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತದೆ. ಅದಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಹಣಕಾಸು ತೊಂದರೆಯಿಂದ ವಿಳಂಬವಾಗಿದೆ ಎಂದರು.covid-death-transport-workers-relief-proposal-finance-department-dcm-lakshman-savdi

ಕೆಎಸ್ ಆರ್ ಟಿಸಿಗೆ ಈಗಲೂ ನಷ್ಟವಾಗುತ್ತಿದೆ. 3 ಸಾವಿರ ಕೊಟಿಗೂ ಹೆಚ್ಚು ಹಣ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಈಗ ಬರುತ್ತಿರುವ ಆದಾಯ ಡೀಸೆಲ್ ಗೆ ಸಾಕಾಗುವುದಿಲ್ಲ. ಇನ್ನು ಸಾರಿಗೆ ಸಿಬ್ಬಂದಿ ವೇತನ ತಡವಾಗುತ್ತಿದೆ. ವೇತನ ತಡವಾದರೂ ಕಡಿತ ಮಾಡಲ್ಲ ಎಂದು ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದರು.

Key words: covid- death-transport workers – relief- Proposal -Finance Department –DCM- Lakshman Savdi.