ಕೋವಿಡ್ ಆತಂಕ ಹಿನ್ನೆಲೆ: ಮೈಸೂರಿನ ‘ಶುಕವನ’ ತಾತ್ಕಾಲಿಕ ಬಂದ್.

ಮೈಸೂರು,ಡಿಸೆಂಬರ್,21,2023(www.justkannada.in): ಕೇರಳ ಹಾಗೂ ತಮಿಳುನಾಡು ರಾಜ್ಯದ ಜೊತೆಗೆ ಇದೀಗ ಕರ್ನಾಟಕದಲ್ಲೂ ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುತ್ತಿದ್ದು ಈ ನಡುವೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಶುಕವನ, ಬೋನ್ಸಾಯಿ ಗಾರ್ಡನ್, ಮ್ಯೂಸಿಯಂ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಆಡಳಿತ ವರ್ಗ ಇದೀಗ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆಚರಣೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆ. ಮುನ್ನೆಚ್ಚರಿಕೆಯಾಗಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿನ ಶುಕವನ, ಬೋನ್ಸಾಯಿ ಗಾರ್ಡನ್ ಹಾಗು ವಿಶ್ವಂ ವಸ್ತು ಸಂಗ್ರಹಾಲಯಗಳು ಅನಿರ್ಧಿಷ್ಟ ಅವಧಿಯವರೆಗೆ ತಾತ್ಕಾಲಿಕ ಬಂದ್ ಮಾಡಲಾಗಿದೆ.

Key words: Covid anxiety-Shukavan- Mysore- temporary-close