ಕೋವಿಡ್ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ: ಎಚ್ಚರಿಕೆಯಿಂದಿರುವಂತೆ ಜನರಿಗೆ ಸಚಿವ ಸುಧಾಕರ್ ಮನವಿ.

ಬೆಂಗಳೂರು,ಜುಲೈ,13,2021(www.justkannada.in): ಕೋವಿಡ್ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು. ಲಸಿಕೆ ತೆಗೆದುಕೊಂಡಿದ್ದರೂ ಮೂರ್ನಾಲ್ಕು ತಿಂಗಳು ಎಚ್ಚರಿಕೆಯಿಂದಿರಿ ಎಂದು ಜನರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.jk

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಸುಧಾಕರ್,  ದೇವಸ್ಥಾನಗಳಲ್ಲಿ, ಮಾರ್ಕೇಟ್ ಗಳಲ್ಲಿ ಜನದಟ್ಟಣೆ ನೋಡಿದರೇ ಭಯವಾಗುತ್ತೆ. ಜನರು ಎಚ್ಚೆತ್ತುಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡದಿದ್ದರೆ 3ನೇ ಅಲೆಗೆ ನಾವೇ ಆಹ್ವಾನ ನೀಡಿದಂತಾಗುತ್ತದೆ  ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ. ಜನರು ಕೂಡಲೇ ಗುಂಪುಗೂಡುವುದು, ಮಾಸ್ಕ್ ಧರಿಸುವುದನ್ನು ನಿಲ್ಲಿಸಬಾರದು. ಮಾರುಕಟ್ಟೆ, ಧಾರ್ಮಿಕ ಕೇಂದ್ರಗಳು, ಮಾಲುಗಳು, ಪ್ರವಾಸಿ ತಾಣಗಳು ಮತ್ತಿತರ ಕಡೆ ಗುಂಪುಗೂಡುವುದು, ಸಾಮಾಜಿಕ ಅಂತರ ಇಲ್ಲದಿರುವುದು ಕಂಡುಬಂದಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂಬುದನ್ನು ಮರೆಯಬೇಡಿ ಎಂದು ಸಲಹೆ ಮಾಡಿದರು.

ಇನ್ನು ಇಂದು ಸಿಎಂ ನೇತೃತ್ವದಲ್ಲಿ ಸಭೆ ಇದೆ.  ನೈಟ್ ಕರ್ಫ್ಯೂ ಮುಂದುವರಿಕೆ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ.  ನೈಟ್ ಕರ್ಫ್ಯೂ ಮುಂದುವರಿಸಬೇಕೋ ಬೇಡವೋ ಎಂಬುದನ್ನ ತೀರ್ಮಾನಿಸಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.

Key words:  covid 2nd -Wave -not completely –gone-Minister- Sudhakar