ಡಿಕೆ.ಶಿವಕುಮಾರ್ ಸೇರಿ ಐವರಿಗೆ ಕೋರ್ಟ್ ನಿಂದ ಸಮನ್ಸ್.

ಬೆಂಗಳೂರು,ಮೇ,31,2022(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಸೇರಿ ಐವರಿಗೆ ದೆಹಲಿಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್​ ನೀಡಿದೆ.

ಡಿಕೆ ಶಿವಕುಮಾರ್ ಸೇರಿ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರಗೆ  ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಚಾರ್ಜ್​ಶೀಟ್ ಸಲ್ಲಿಕೆ ಬಳಿಕ ಕೋರ್ಟ್​​ನಿಂದ ಸಮನ್ಸ್ ಜಾರಿಯಾಗಿದೆ. ಜುಲೈ 1ರಂದು ಕೋರ್ಟ್​ಗೆ ಹಾಜರಾಗುವಂತೆ ಡಿಕೆಶಿ ಸೇರಿ ಐವರಿಗೆ ಸೂಚನೆ ನೀಡಲಾಗಿದ್ದು, ಜುಲೈ 1 ಕ್ಕೆ ವಿಚಾರಣೆ ಮುಂದೂಡಿದೆ.

ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೋರ್ಟ್‌ನ ಲ್ಲಿ ಮೇ 28 ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ವಿಕಾಸ್‌ ದುಲ್‌ರವರ ಪೀಠದಲ್ಲಿ ವಿಚಾರಣೆ ನಡೆದಿದ್ದು. ವಾದವನ್ನು ಆಲಿಸಿದ ಇಡಿ ವಿಶೇಷ ನ್ಯಾಯಾಲಾಯ ವಿಚಾರಣೆಯನ್ನು ಮೇ 31ಕ್ಕೆ ವಿಚಾರಣೆ ಮುಂದೂಡಿದ್ದರು. ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಡಿಕೆಶಿಗೆ ಸಮನ್ಸ್ ನೀಡಿದೆ.

Key words: court -summons –KPCC-president-DK Shivakumar