ಮಾ.28 ರಂದು ಖುದ್ದು ಹಾಜರಾಗುವಂತೆ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್.

ಬೆಂಗಳೂರು,ಫೆಬ್ರವರಿ,23,2024(www.justkannada.in): ಚುನಾವಣೆ ವೇಳೆ ಬಿಜೆಪಿ ವಿರುದ್ದ ಅವಹೇಳನಕಾರಿ ಜಾಹೀರಾತು  ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ  ಮಾರ್ಚ್ 28 ರಂದು ಖುದ್ದು ಹಾಜರಾಗುವಂತೆ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಜಡ್ಜ್  ಜೆ. ಪ್ರೀತ್ ಅವರು ಕಾಂಗ್ರೆಸ್ ನಾಯಕರಾದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆ  ಕಾಂಗ್ರೆಸ್  ಪಕ್ಷ  ಜಾಹೀರಾತು ನೀಡಿತ್ತು. ಅಂದಿನ ಬಿಜೆಪಿ ಸರ್ಕಾರದ ವಿರುದ್ದ  40 ಪರ್ಸೆಂಟ್ ಕಮಿಷನ್ ಮತ್ತಿತರ ಆರೋಪಗಳನ್ನ ಮಾಡಿ ಜಾಹೀರಾತು ಬಿಡುಗಡೆ ಮಾಡಿತ್ತು.  ಕರಪ್ಷನ್ ರೇಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿತ್ತು.

ಈ ಸಂಬಂಧ  ವಿನೋದ್ ಕುಮಾರ್ ಅವರು ಕಾಂಗ್ರೆಸ್ ನಾಯಕರ ವಿರುದ್ದ ಖಾಸಗಿ ದೂರು  ಸಲ್ಲಿಸಿದ್ದರು. ಅವಹೇಳನಕಾರಿ ಜಾಹೀರಾತಿನಿಂದ ಬಿಜೆಪಿಗೆ ಹಾನಿ ಎಂದು ವಕೀಲ ವಿನೋದ್ ಕುಮಾರ್ ವಾದ ಮಂಡಿಸಿದ್ದರು.

ಇನ್ನು ಈ ಖಾಸಗಿ ದೂರು ವಿಚಾರಣೆ ನಡೆಸಿರುವ ಕೋರ್ಟ್ ಇದೀಗ ಮಾರ್ಚ್ 28 ರಂದು ಖುದ್ದು ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

Key words: Court- summons – Congress leaders – March 28-bjp