ಗರ್ಭಿಣಿ ಪತ್ನಿ ಕೊಲೆಗೈದಿದ್ಧ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್.

ಚಾಮರಾಜನಗರ,ಸೆಪ್ಟಂಬರ್,15,2022(www.justkannada.in):  ಗರ್ಭಿಣಿ ಪತ್ನಿಯನ್ನ ಕೊಲೆಗೈದಿದ್ಧ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಕೊಳ್ಳೆಗಾಲ ತಾಲ್ಲೂಕಿನ ರಾಚಪ್ಪಾಜಿ ನಗರ ನಿವಾಸಿ ಮುತ್ತುರಾಜ್ ಶಿಕ್ಷೆಗೊಳಗಾದ ಅಪರಾಧಿ. 2013ರಲ್ಲಿ ಗರ್ಭಿಣಿ ಪತ್ನಿ ಕೊಂದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 2.10 ಲಕ್ಷ ರೂ ದಂಡ ವಿಧಿಸಿ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಬಿಎಸ್ ಭಾರತಿ ಆದೇಶಿಸಿದ್ದಾರೆ.

2013ರಲ್ಲಿ ಮುತ್ತುರಾಜ್ ತನ್ನ ಗರ್ಭಿಣಿ ಪತ್ನಿ ಜ್ಯೋತಿಗೆ ಜ್ಯೂಸ್ ನೊಂದಿಗೆ ಮದ್ಯ ಕುಡಿಸಿ ಹತ್ಯೆಗೈದಿದ್ದನು. ಈ ಆರೋಪ ಸಾಬೀತಾಗಿತ್ತು.  ಸರ್ಕಾರದ ಪರವಾಗಿ ಟಿಎಚ್ ಲೋಲಾಕ್ಷಿ ಅವರು ವಾದ ಮಂಡಿಸಿದ್ದರು.

Key words:  court- sentenced  husband – life imprisonment- murdered – pregnant wife