ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಗೆ ಕೋರ್ಟ್ ನಕಾರ: ಹಾಸಿಗೆ ದಿಂಬು ನೀಡಲು ಅನುಮತಿ

ಬೆಂಗಳೂರು,ಸೆಪ್ಟಂಬರ್,9,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ನಿರಾಕರಿಸಿದೆ.

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಾಲಯ, ಬಳ್ಳಾರಿ ಜೈಲಗೆ ಸ್ಥಳಾಂತರಿಸಲು ಸಕಾರಣಗಳಿಲ್ಲ ಜೈಲಿನ ಕೈಪಿಡಿ ಅನುಸರಿಸುವಂತೆ ಸೂಚನೆ ನೀಡಿತು. ಹಾಗೆಯೇ ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಕನಿಷ್ಠ ಸೌಲ್ಯಭ್ಯ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ಕೋರ್ಟ್, ದರ್ಶನ್ ಜೈಲಿನೊಳಗೆ ಓಡಾಡಲು ಅನುಮತಿ ನೀಡಿದೆ. ಹಾಗೆಯೇ ದರ್ಶನ್ ಗೆ ಹೆಚ್ಚವರಿ ಹಾಸಿಗೆ ದಿಂಬು ನೀಡಲು ಅನುಮತಿ ನೀಡಿ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

Key words: Court,  actor, Darshan, shift , Ballari jail