Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ದೇಶ ಬಲಿಷ್ಟವಾಗಿ ಒಗ್ಗಟ್ಟಾಗಿದೆ: ನಿಮ್ಮ ಜೋಡೋಯಾತ್ರೆ ಯಾಕೆ ಬೇಕು..? – ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ...

ದೇಶ ಬಲಿಷ್ಟವಾಗಿ ಒಗ್ಗಟ್ಟಾಗಿದೆ: ನಿಮ್ಮ ಜೋಡೋಯಾತ್ರೆ ಯಾಕೆ ಬೇಕು..? – ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ.

ಬೆಂಗಳೂರು,ಅಕ್ಟೋಬರ್,15,2022(www.justkannada.in):  ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ದೇಶ ಬಲಿಷ್ಟವಾಗಿ ಒಗ್ಗಟ್ಟಾಗಿದೆ. ನಿಮ್ಮ ಜೋಡೋಯಾತ್ರೆಗೆ ಯಾಕೆ ಬೇಕು..? ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ,  ಕಾಂಗ್ರೆಸ್ ನವರ ಭಾರತ್ ಜೋಡೋ ಅರ್ಥ ಏನು..?  ಈಗ ಜೋಡೋಯಾತ್ರೆ ಯಾಕೆ ಮಾಡುತ್ತಿದ್ದಾರೆ  ಈಗ ಭಾರತ ಒಗ್ಗಟ್ಟಾಗಿದೆ. ಅಂತರಾಷ್ಟ್ರಿಯ ಮಟ್ಟದಲ್ಲಿ ಭಾರತ ಮುಂದಿದೆ. ರಾಹುಲ್ ಅನ್ನೋ ಮಿಸೈಲ್ ಬಿಟ್ಟಿದ್ರು. ಮಿಸೈಲ್ ಫೇಲ್ ಆಯ್ತು ಎಂದು ಲೇವಡಿ ಮಾಡಿದರು.ದೇಶ ಬಲಿಷ್ಟವಾಗಿ ಒಗ್ಗಟ್ಟಾಗಿದೆ: ನಿಮ್ಮ ಜೋಡೋಯಾತ್ರೆ ಯಾಕೆ ಬೇಕು..? – ಕಾಂಗ್ರ...

ಸೋನಿಯಾ ಗಾಂಧಿ ಅವರು ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದರು ಬಳ್ಳಾರಿ ಬಿಟ್ಟು ರಾಯ್ ಬರೇಲಿ ಕ್ಷೇತ್ರಕ್ಕೆ ಹೋದರು. ಸೋನಿಯಾ ಗಾಂಧಿ ಬಳ್ಳಾರಿ ಜನರಿಗೆ ಕೃತಜ್ಞತೆ ಹೇಳಲು ಬರಲಿಲ್ಲ ಈಗ ಯಾವ ಮುಖ ಇಟ್ಟುಕೊಂಡು ಸಮಾವೇಶ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

Key words: country – strongly –united-Barath Jodoyatra..-CM –Bommai