ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ: ಅರಮನೆ ಸುತ್ತ 144 ಸೆಕ್ಷನ್ ಜಾರಿ….

ಮೈಸೂರು,ಅಕ್ಟೋಬರ್,26,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಕೊರೋನಾ ಹಿನ್ನೆಲೆ ಈ ಬಾರಿ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿದೆ.jk-logo-justkannada-logo

ಅಂಬಾವಿಲಾಸ ಅರಮನೆ ಎದುರು ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ಸಾಗಲಿದ್ದಾನೆ. ಮೆರವಣಿಗೆ  ವೀಕ್ಷಣೆ ಮಾಡಲು ಕೇವಲ 300 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಜಂಬೂ ಸವಾರಿ ಮೆರವಣಿಗೆ ನೋಡಲು ಸಾರ್ವಜನಿಕರಿಗೆ ಅವಕಾಶ ಇಲ್ಲ. ಹೀಗಾಗಿ ಅರಮನೆ ಸುತ್ತ 200 ಮೀಟರ್ 144 ಸೆಕ್ಷನ್ ಜಾರಿ ಮಾಡಲಾಗಿದೆ. ಅವರಮನೆ ಆವರಣ ಸೇರಿದಂತೆ ಅರಮನೆಯ ಸುತ್ತ ಭದ್ರತೆ ವಹಿಸಲಾಗಿದೆ.

ಇನ್ನು ಬೆಳ್ಳಂಬೆಳಿಗ್ಗೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ  ಭದ್ರತೆ ಪರಿಶೀಲನೆ ನಡೆಸಲಾಯಿತು. ಅರಮನೆಯ ಸುತ್ತ ಹಾಗೂ ಒಳ ಭಾಗದಲ್ಲಿ‌ ಒಟ್ಟು 5 ತಂಡಗಳು ತಪಾಸಣೆ ನಡೆಸುತ್ತಿದ್ದು, ಡಿಎಆರ್, ಸಿಎಆರ್ ಸೇರಿ ಮೈಸೂರು ನಗರದ ಪೊಲೀಸರಿಂದಲೇ ಭದ್ರತೆ ವ್ಯವಸ್ಥೆ ಮಾಡಲಾಗಿದೆ.Countdown - Mysore -Dasara Jambusavari-Section 144 -enforcement - palace.

ಮೈಸೂರಿನ ರಾಜಬೀದಿಗಳು ಖಾಲಿ‌ಖಾಲಿ….

ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದ್ದು ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾದ ಹಿನ್ನೆಲೆ, ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ದಸರಾ ಸಂದರ್ಭದಲ್ಲಿ ಸಾವಿರಾರು ಜನರಿಂದ ಕಿಕ್ಕಿರಿಯುತ್ತಿದ್ದ ರಾಜಬೀದಿಗಳು ಇದೀಗ ಖಾಲಿಖಾಲಿಯಾಗಿದೆ. ಅರಮನೆ ಸುತ್ತಮುತ್ತಲಿನ ರಸ್ತೆಗಳು ಹಾಗೂ ವೃತ್ತಗಳಲ್ಲೂ ಸಾರ್ವಜನಿಕರು ನಿಲ್ಲುವಂತಿಲ್ಲ.ಪೊಲೀಸರು ಸಾರ್ವಜನಿಕರನ್ನ ಹೊರಗಡೆ ಕಳುಹಿಸುತ್ತಿದ್ದು, ರಾಜಬೀದಿಗಳಲ್ಲಿ ನಿಶಬ್ದ ಆವರಿಸಿದೆ.

Key words: Countdown – Mysore -Dasara Jambusavari-Section 144 -enforcement – palace.