ಉನ್ನತ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ದಾಖಲೆ ನೀಡಲು ನಾನು ಸಿದ್ಧ- ಮಾಜಿ ಸಚಿವ ಹೆಚ್.ಡಿ ರೇವಣ್ಣ.

kannada t-shirts

ಬೆಂಗಳೂರು,ಸೆಪ್ಟಂಬರ್‍,23,2022(www.justkannada.in): BMS ಟ್ರಸ್ಟ್‌ʼನಲ್ಲಿ ಅಕ್ರಮ ನಡೆದಿದ್ದು ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೇರಿ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಪಟ್ಟು ಹಿಡಿದು ಧರಣಿ ನಡೆಸಿದ್ದಾರೆ.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ನಡೆಸಿದ ಜೆಡಿಎಸ್ ಸದಸ್ಯರು BMS ಟ್ರಸ್ಟ್‌ʼನಲ್ಲಿ ಅಕ್ರಮ ಕುರಿತು ಉತ್ತರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಈ ಮಧ್ಯೆ ಸದನದಲ್ಲಿ ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ದಾಖಲೆ ನೀಡಲು ನಾನು ಸಿದ್ಧ. ಇಲಾಖೆ ಅಕ್ರಮ ಬಗ್ಗೆ ತನಿಖೆ ಮಾಡಿಸ್ತೀರಾ..? ದಾಖಲೆ ನೀಡಲು ವಿಫಲವಾದರೇ  ನಾನು ನನ್ನ ಸ್ಥಾನ ಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

Key words: Corruption –higher education- department-Former minister- HD Revanna.

website developers in mysore