ನಿಗಮಮಂಡಳಿ ಪಟ್ಟಿ ಅಂತಿಮ: ಮೊದಲ ಬಾರಿ ಶಾಸಕರಾದವರಿಗೆ ಸ್ಥಾನ ಇಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ನವೆಂಬರ್,29,2023(www.justkannada.in): ನಿಗಮಮಂಡಳಿ ನೇಮಕ ಪಟ್ಟಿ ಅಂತಿಮವಾಗಿದ್ದು ಹೈಕಮಾಂಡ್ ಗೆ ಪಟ್ಟಿ ರವಾನೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ ಶೀವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,   ನಿಗಮ ಮಂಡಳಿ ಪಟ್ಟಿಯನ್ನ ಹೈಕಮಾಂಡ್ ಗೆ ರವಾನೆ ಮಾಡಲಾಗಿದ್ದು, ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡುತ್ತೇವೆ. ಮೊದಲಬಾರಿ ಶಾಶಕರಾದವರಿಗೆ ನಿಗಮ ಸ್ಥಾನವಿಲ್ಲ.  2ನೇ ಹಂತದಲ್ಲಿ ಕಾರ್ಯಕರ್ತರಿಗೆ ನಿಗಮಮಂಡಳಿ ಸ್ಥಾನ  ನೀಡುತ್ತೇವೆ ಎಂದರು.

ಸಿಎಂಗೆ ಬಿಆರ್ ಪಾಟೀಲ್ ಪತ್ರ ಬರೆದಿರುವ ವಿಚಾರ ಗೊತ್ತಿಲ್ಲ ಈ ವಿಚಾರವನ್ನ ಸಂಬಂಧ ಪಟ್ಟ ಸಚಿವರ ಜೊತೆ ಮಾತನಾಡುತ್ತೇವೆ.  ಹಿಂದೆ ಕೆಲ ಸಚಿವರು ಹೇಳಿರುವ ವಿಚಾರಗಳನ್ನೂ ಚರ್ಚಿಸುತ್ತೇವೆ ಬಿ.ಆರ್ ಪಾಟೀಲ್ ಅವರನ್ನೂ ಕರೆದು ಚರ್ಚೆ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Corporation- list- final- DCM -DK Shivakumar.