ಕೊರೋನಾ ಸೋಂಕಿತ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ. ಎಸ್ ಹರ್ಷ…

ಬೆಂಗಳೂರು, ಆ,11,2020(www.justkannada.in):  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿ ಒಳಗೊಂಡಂತೆ 21 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಲಾಖಾ ಆಯುಕ್ತ ಡಾ ಪಿ ಎಸ್ ಹರ್ಷ ಅವರು ನಗರದ ವಿವಿಧೆಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಜೂಮ್ ಸಮ್ಮೇಳನದ ಮೂಲಕ ಮಾತುಕತೆ ನಡೆಸಿ ಆರೋಗ್ಯ ವಿಚಾರಿಸಿದರು.jk-logo-justkannada-logo

ಸ್ವತಃ ವೈದ್ಯರೂ ಆಗಿರುವ ಡಾ ಹರ್ಷ ಅವರು ಈ ಸೋಂಕು ಕುರಿತು ಭಯಪಡುವ ಅಗತ್ಯವಿಲ್ಲ. ಅಂತೆಯೇ, ಈ ಸೋಂಕನ್ನು ಯಾರೂ ನಿರ್ಲಕ್ಷಿಸುವಂತೆಯೂ ಇಲ್ಲ. ಸಕಾಲಿಕ ಚಿಕಿತ್ಸೆ ಅತ್ಯಾವಶ್ಯಕ. ವೈದ್ಯರು ನೀಡುತ್ತಿರುವ ಔಷಧಿ ಹಾಗೂ ಮಾತ್ರೆಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಿ. ಶೀಘ್ರವೇ ಗುಣಮುಖರಾಗುವಿರಿ. ಸಂಕಷ್ಟದ ಕಾಲದಲ್ಲಿ ನೀವು ಒಬ್ಬಂಟಿಯಲ್ಲ ! ಇಲಾಖೆ ತಮ್ಮ ಜೊತೆಗಿದೆ ಎಂದು ಧೈರ್ಯ ತುಂಬಿದರು.coroner-infect-officer-staff-department-information-and-public-relations-commissioneರ-dr-p-s-harsha

Key words: Coroner –Infect- Officer-staff- Department – Information and Public Relations-Commissioner-Dr. P. S Harsha