ಬ್ರಿಟನ್’ನಲ್ಲಿ ಕೊರೊನಾ ವೈರಸ್‌ಗೆ ಮೊದಲ ಭಾರತೀಯ ಬಲಿ

ಬ್ರಿಟನ್, ಮಾರ್ಚ್ 11, 2020 (www.juskannada.in): ಕೊರೊನಾ ವೈರಸ್‌ಗೆ ಮೊದಲ ಭಾರತೀಯ ಬಲಿಯಾಗಿದ್ದಾರೆ.

ಬ್ರಿಟನ್‌ನಲ್ಲಿ ವಾಸ ಮಾಡುತ್ತಿದ್ದ ಮನೋಹರ್ ಕೃಷ್ಣ ಪ್ರಭು ಎಂಬ ಭಾರತ ಮೂಲದ ವ್ಯಕ್ತಿ ಕೊರೊನಾದಿಂದ ಮೃತರಾಗಿದ್ದಾರೆ. ಮನೋಹರ್ ಕೃಷ್ಣ ಪ್ರಭು ಅವರಿಗೆ 80 ವಯಸ್ಸಾಗಿತ್ತು.

ಇಟಲಿಯ ವ್ಯಕ್ತಿಯಿಂದ ಇವರಿಗೆ ವೈರಸ್ ಹರಡಿತ್ತು. ಮನೋಹರ್ ಪುತ್ರನ ಬಳಿ ಇದ್ದ ಆಡಿಯೋ ಉಪಕರಣವೊಂದನ್ನು ಪಡೆಯುವ ವೇಳೆ ಇಟಲಿಯ ವ್ಯಕ್ತಿಯಿಂದ ವೈರಸ್ ಹರಡಿದೆ ಎಂದು ತಿಳಿದು ಬಂದಿದೆ.

ಮನೋಹರ್ ಮಗನಿಗೂ ಸಹ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಕಳೆದ 10 ದಿನಗಳಿಂದ ಮನೋಹರ್ ವ್ಯಾಟ್ ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಇದ್ದರು.