ಕೊಡಗಿನಲ್ಲಿ ಇಂದು 11 ಮಂದಿಗೆ ಕೊರೋನಾ ಸೋಂಕು: ಓರ್ವ ಮಹಿಳೆ ಸಾವು…

ಕೊಡಗು,ಜು,30,2020(www.justkannada.in):  ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು ಈ ನಡುವೆ ಇಂದು ಕೊಡಗು ಜಿಲ್ಲೆಯಲ್ಲಿ 11 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.jk-logo-justkannada-logo

ಸೋಮವಾರಪೇಟೆಯಲ್ಲಿ 8, ಮಡಿಕೇರಿಯಲ್ಲಿ ಇಬ್ಬರು, ವಿರಾಜಪೇಟೆಯಲ್ಲಿ ಓರ್ವ ವ್ಯಕ್ತಿಗೆಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 385ಕ್ಕೆ ಏರಿಕೆಯಾಗಿದೆ.

ಕೊರೋನಾ ಸೋಂಕಿನಿಂದ 54 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.  ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಮಹಿಳೆಗೆ ಜ್ವರವಿತ್ತು. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾರೆ.

Key words: Coronavirus -infects -11 people -today – Kodagu.