ಲಸಿಕೆ ಪಡೆದ ಐದು ಮಂದಿ ವೈದ್ಯರಿಗೆ ಕೊರೋನಾ ಸೋಂಕು…

ಚಾಮರಾಜನಗರ,ಜನವರಿ,30,2021(www.justkannada.in):  ಕೊರೋನಾ ಲಸಿಕೆ ಪಡೆದ ಐವರು ವೈದ್ಯರಿಗೆ  ಕೊರೊನಾ ವೈರಸ್ ಸೋಂಕು  ಕಾಣಿಸಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.jk

 ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐದು ಮಂದಿ ವೈದ್ಯರಿಗೆ ಕೊರೋನಾ ಲಸಿಕೆ ಪಡೆದಿದ್ದರೂ ಕೊರೋನಾ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಪಡೆದಿದ್ದರು. ಆದರೂ ಸಹ ಅವರಿಗೆ ಕಳೆದ  10 ದಿನಗಳ ಅಂತರದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. Coronavirus -infection - five vaccinated- doctors-chamarajanagar

ಸದ್ಯ ಕೋವಿಡ್ ಪಾಸಿಟಿವ್ ಆಗಿರುವ ವೈದ್ಯರೂ ಚಿಕಿತ್ಸೆ ಪಡೆಯುತ್ತಿದ್ದು, 6 ವೈದ್ಯರು ಹೋಂ ಐಸೋಲೇಷನ್ ಆಗಿದ್ದಾರೆ ಎಂದು ಚಾಮರಾಜನಗ ಡಿಹೆಚ್ ಒ ಮಾಹಿತಿ ನೀಡಿದ್ದಾರೆ.

Key words: Coronavirus -infection – five vaccinated- doctors-chamarajanagar