Tuesday, September 15, 2026

BDA Apartments

ದೇಶದಲ್ಲಿ ಕಡಿಮೆಯತ್ತ ಕೊರೋನಾ ಸೋಂಕು: ಹೊಸದಾಗಿ 21,257 ಕೋವಿಡ್ ಪ್ರಕರಣ ಪತ್ತೆ BDA J...
Home Front Page ದೇಶದಲ್ಲಿ ಕಡಿಮೆಯತ್ತ ಕೊರೋನಾ ಸೋಂಕು:  ಹೊಸದಾಗಿ 21,257  ಕೋವಿಡ್ ಪ್ರಕರಣ ಪತ್ತೆ.

ದೇಶದಲ್ಲಿ ಕಡಿಮೆಯತ್ತ ಕೊರೋನಾ ಸೋಂಕು:  ಹೊಸದಾಗಿ 21,257  ಕೋವಿಡ್ ಪ್ರಕರಣ ಪತ್ತೆ.

ನವದೆಹಲಿ,ಅಕ್ಟೋಬರ್,8,2021(www.justkannada.in):  ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿನ ಪ್ರಮಾಣ ಕುಸಿತ ಕಾಣುತ್ತಿದ್ದು, ಕಳೆದ 24 ಗಂಟೆಯಲ್ಲಿ 21,257 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,38,94,312ಕ್ಕೆ ಏರಿಕೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 271  ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಮೃತಪಟ್ಟವರ ಸಂಖ್ಯೆ 4,50,127 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ 2,40,221 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು,ಕಳೆದ 24 ಗಂಟೆಯಲ್ಲಿ 24,963 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ದೇಶದಲ್ಲಿ 13,85,706 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 24 ಗಂಟೆಯಲ್ಲಿ 50,17,753 ಜನರಿಗೆ ಲಸಿಕೆ ನೀಡಲಾಗಿದೆ.

Key words: Coronavirus- infection – country-21,257 -newly -discovered -Covid case.