ಕೊರೊನಾ ಪ್ರಕರಣ ಹೆಚ್ಚಳ, ಉಪಚುನಾವಣೆ ಪ್ರಚಾರಕ್ಕೆ ಕಡಿವಾಣ ಹಾಕಬೇಕಿತ್ತು : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏಪ್ರಿಲ್,13,2021(www.justkannada.in) : ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳಕ್ಕೆ ಸರ್ಕಾರದ ವೈಫಲ್ಯವೇ ಕಾರಣ. ಉಪಚುನಾವಣೆ ಪ್ರಚಾರಕ್ಕೆ ಕಡಿವಾಣ ಹಾಕಬೇಕಿತ್ತು. ಅವರು ಪ್ರಚಾರಕ್ಕೆ ಹೋಗದಿದ್ದರೆ, ನಾವು ಹೋಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.Siddaramaiah,Psychological,Information,Technology,Fixed,Lost,BJP President,Nalin Kumar Kateel

ಕೊರೊನಾ ಹೆಚ್ಚಳವಾಗುತ್ತಿದ್ದು, ಉಪಚುನಾವಣೆ ಮಾಡಬಾರದಿತ್ತು. ಚುನಾವಣಾ ಆಯೋಗಕ್ಕೆ ಉಪಚುನಾವಣೆ ಬೇಡವೆಂದು ಪತ್ರ ಬರೆಯಬೇಕಿತ್ತು. ಅವರು ಪ್ರಚಾರಕ್ಕೆ ಹೋಗದಿದ್ದರೆ, ನಾವು ಪ್ರಚಾರಕ್ಕೆ ಹೋಗುತ್ತಿರಲಿಲ್ಲ ಎಂದಿದ್ದಾರೆ.

ಹೊರಗಿನಿಂದ ಬರುವವರಿಗೆ ಟೆಸ್ಟ್ ಮಾಡಿಸುವುದನ್ನು ನಿಲ್ಲಿಸಿದರು. ಜಾತ್ರೆ, ಸಮಾರಂಭಗಳನ್ನು ನಿಯಂತ್ರಣ ಮಾಡಲಿಲ್ಲ. ಸೋಂಕಿತರಿಗೆ ಬೆಡ್ ಗಳನ್ನು ಒದಗಿಸಬೇಕು. ಐಸಿಯು ಕೊರತೆಯಾಗಬಾರದು.Former CM Siddaramaiah demands Govt. to issue White Paper on COVID-19 Pandemic details

ಕೊರೊನಾ ನಿಯಂತ್ರಣ ಸರ್ವ ಪಕ್ಷ ಸಭೆಗೆ ಇನ್ನೂ ಆಹ್ವಾನ ಬಂದಿಲ್ಲ. ಲಾಕ್ ಡೌನ್ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು.

key words : Corona-case-increase-By-election-campaign-Reduced-Former CM-Siddaramaiah