ಕೊರೋನಾ ವಾರಿಯರ್ಸ್ ಗೆ ಸೋಂಕು: ಮೈಸೂರಿನಲ್ಲಿಂದು 60ಕ್ಕೂ  ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಸಾಧ್ಯತೆ…

ಮೈಸೂರು,ಜು,22,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿದಿನ ಶತಕ ದಾಟುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಈ ದಿನ ಸ್ವಲ್ಪ ಇಳಿಕೆ ಕಾಣುವ ಸಾಧ್ಯತೆ ಇದೆ.jk-logo-justkannada-logo

ಇಂದು ಸಹ ಮೈಸೂರಿನಲ್ಲಿ 60ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಮೈಸೂರಿನಲ್ಲಿ ಪ್ರತಿ ದಿನ ಕೊರೋನಾ ಪ್ರಕರಣಗಳು 100ರ ಗಡಿ ದಾಟುತ್ತಿತ್ತು. ಆದರೆ ಇಂದು  ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ.corona-warriors-corona-positive-cases-mysore-today

ಇಂದೂ ಕೂಡ ಕೊರೊನಾ ವಾರಿಯರ್ಸ್ ಗೆ  ಸೋಂಕು ತಗುಲಿದೆ. ವೈದ್ಯರು, ಪೋಲಿಸರಲ್ಲೂ ಸೋಂಕು ಕಾಣಿಸಿಕೊಂಡಿದೆ. ನಗರದ ಪ್ರಮುಖ ಬಡಾವಣೆ ಗಳಲ್ಲಿ‌, ಹುಣಸೂರು, ನಂಜನಗೂಡು, ಹಾಗೂ ಎಚ್ ಡಿ ಕೋಟೆ ಭಾಗದಲ್ಲಿ  ಕೊರೋನಾ ಸೋಂಕು ದೃಢವಾಗಿದೆ. ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇಂದು ಕೂಡ ಹೊಸ ಕಂಟೈನ್ಮೆಟ್ ಝೋನ್ ಸಾಧ್ಯತೆ ಇದೆ. ಎನ್ ಆರ್ ಕ್ಷೇತ್ರದ ಲಾಕ್ ಡೌನ್ ನಿಂದ ಇಂದು ಸೋಂಕಿತರ ಸಂಖ್ಯೆ ಕಡಿಮೆ ಮಾಡುವಲ್ಲಿ ಪರಿಣಾಮ ಬೀರಿದೆಯಾ ಎನ್ನಲಾಗುತ್ತಿದೆ.

Key words: Corona Warriors– Corona -Positive -Cases – Mysore -Today.