Friday, September 18, 2026

BDA Apartments

ಮಹಾಮಾರಿ ಕೊರೋನಾಗೆ ಪಿಡಿಒ ಬಲಿ… BDA JK_Adv BDA Adv
Home Front Page ಮಹಾಮಾರಿ ಕೊರೋನಾಗೆ ಪಿಡಿಒ ಬಲಿ…

ಮಹಾಮಾರಿ ಕೊರೋನಾಗೆ ಪಿಡಿಒ ಬಲಿ…

ಕಲಬುರ್ಗಿ,ಜು,25,2020(www.justkannada.in):  ಕೊರೋನಾ ಮಹಾಮಾರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಲಿಯಾಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.jk-logo-justkannada-logo

ಕಲಬುರ್ಗಿ ಜಿಲ್ಲೆಯ ಶಹಬಾದ್ ತಾಲೂಕಿನ ಮರತೂರು ಗ್ರಾಮ ಪಂಚಾಯ್ತಿ ಪಿಡಿಒ ಕೊರೋನಾಗೆ ಬಲಿಯಾಗಿದ್ದಾರೆ. ಪಿಡಿಒಗೆ ಜುಲೈ17 ರಂದು ಕೊರೋನಾ ಪಾಸಿಟಿವ್ ದೃಢವಾಗಿತ್ತು. ಹೀಗಾಗಿ ಅವರನ್ನ ಕಲ್ಬುರ್ಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಂಕಿತ ಪಿಡಿಒ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಕಲ್ಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಜಿಲ್ಲೆಯಲ್ಲಿ  ಕೊರೋನಾಗೆ ಪಿಡಿಒ ಬಲಿಯಾಗಿದ್ದಾರೆ.corona –virus-PDO-death-kalburgi

ಹೊನಗುಂಟ ಪಂಚಾಯತ್ ನಲ್ಲಿ 9, ಮರತೂರಿನಲ್ಲಿ 11 ಸಿಬ್ಬಂದಿ ಇವರ ಜೊತೆಗೂಡಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಇದುವರೆಗೆ ಯಾರೊಬ್ಬರಿಗೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ.

Key words: corona –virus-PDO-death-kalburgi