ಕ್ರೆಡಿಟ್-ಐ ಸಂಸ್ಥೆಯಿಂದ ಕೊರೊನಾ ಲಸಿಕಾ ಕಾರ್ಯಕ್ರಮ

ಮೈಸೂರು, ಸೆಪ್ಟೆಂಬರ್ 26, 2021 (www.justkannada.in): ನಾಗವಾಲ, ಸೀಗಳ್ಳಿ ಹಾಗೂ ಹೊಸಕಾಮನ ಕೊಪ್ಪಲು ಗ್ರಾಮಗಳಲ್ಲಿ ಶೇ.100 ಲಸಿಕೆ ನೀಡುವ ಗುರಿಯೊಂದಿಗೆ 2 ನೇ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮ ನಡೆಸಲಾಯಿತು.

ಮೈಸೂರು ಜಿಲ್ಲಾಡಳಿತ, ನಾಗವಾಲ ಗ್ರಾಮ ಪಂಚಾಯಿತಿ, ಕ್ರೆಡಿಟ್ – ಐ ಸಂಸ್ಥೆ, ವುರ್ಥ್ ಎಲೆಕ್ಟ್ರಾನಿಕ್ ಇಂಡಿಯಾ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಹಭಾಗಿತ್ವದಲ್ಲಿ ದೇಶದ ಮೊಟ್ಟಮೊದಲ ಕರೋನಮುಕ್ತ ಗ್ರಾಮ ಪಂಚಾಯಿತಿ ನಿರ್ಮಾಣದ ಗುರಿಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಾಗವಾಲ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಭಾಗವಾಗಿ ನಾಗವಾಲ ಪಂಚಾಯಿತಿಗೆ ಸೇರಿದ ನಾಗವಾಲ, ಸೀಗಳ್ಳಿ ಹಾಗೂ ಹೊಸಕಾಮನ ಕೊಪ್ಪಲು ಗ್ರಾಮಗಳಲ್ಲಿ ಕೊರೊನಾ ಲಸಿಕಾ ಕಾರ್ಯಕ್ರಮ ನಡೆಸಲಾಯಿತು ಎಂದು ಕ್ರೆಡಿಟ್ – ಐ ಸಂಸ್ಥೆಯ ಡಾ.ಎಂ.ಪಿ.ವರ್ಷ ತಿಳಿಸಿದ್ದಾರೆ.

key words: Corona Vaccine Program by Credit-I organization