ರಾಜ್ಯದಲ್ಲಿ ಇಳಿಕೆ ಕಂಡ ಕೊರೋನಾ: ಇಂದು ಹೊಸದಾಗಿ 973 ಕೋವಿಡ್ ಪ್ರಕರಣ ಪತ್ತೆ.

ಬೆಂಗಳೂರು,ಸೆಪ್ಟಂಬರ್,6,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಯಾಗುತ್ತಿದ್ದು ಈ ನಡುವೆ ರಾಜ್ಯದಲ್ಲಿ ಇಂದು ಹೊಸದಾಗಿ 973 ಕೋವಿಡ್ ಪ್ರಕರಣಗಳು ದೃಢವಾಗಿವೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಇಂದು ಕೋವಿಡ್ ನಿಂದ  17 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಹಾಗೆಯೇ ಇಂದು ಕೊರೋನಾದಿಂದ ಗುಣಮುಖರಾಗಿ 1071  ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 17,386 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಿದೆ.

ರಾಜ್ಯದಲ್ಲಿಂದು 1,39,090 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.69 ರಷ್ಟು ಇದೆ. ಇನ್ನು ಬೆಂಗಳೂರಿನಲ್ಲಿ ಇಂದು ಹೊಸದಾಗಿ 243 ಜನರಿಗೆ  ಸೋಂಕು ತಗುಲಿದೆ. 8 ಮಂದಿ  ಕೊರೋನಾದಿಂದ ಸಾವನ್ನಪ್ಪಿದ್ದಾರೆ.

Key words: Corona -today -reported –new- 973 -Covid case.