ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೂ ಕೊರೋನಾ ಟೆಸ್ಟ್…?

ಮೈಸೂರು,ಸೆಪ್ಟಂಬರ್,11,2020(www.justkannada.in): ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚಾಗಿ ಹರಡುತ್ತಿದ್ದು ಇತ್ತೀಚೆಗೆ ವಿದೇಶದ ಮೃಗಾಲಯವೊಂದರಲ್ಲಿ ಹುಲಿಗೆ ಕೊರೊನಾ ಸೋಂಕು  ದೃಢಪಟ್ಟ ವರದಿಗಳು ಕಂಡು ಬಂದಿತ್ತು. ಹೀಗಾಗಿ ಪ್ರಾಣಿಗಳಿಗೂ ಕೊರೋನಾ ಆತಂಕ ಕಾಡುತ್ತಿದೆ.jk-logo-justkannada-logo

ಈ ಹಿನ್ನೆಲೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೂ ಕೊರೋನಾ ಟೆಸ್ಟ್ ನಡೆಸುವ ಸಾಧ್ಯತೆ ಇದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಡಿಸಿಎಫ್ ( ಉಪ ಅರಣ್ಯ ಸಂರಕ್ಷಣಾಧಿಕಾರಿ ) ಎಂ.ಸಿ ಅಲೆಗ್ಸಾಂಡರ್, ದಸರಾ ಆನೆಗಳ ಬಗ್ಗೆಯೂ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುವುದು. ಅವಶ್ಯಕತೆ ಬಿದ್ದರೆ ಆನೆಗಳಿಗೂ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಈ ಬಗ್ಗೆ ತಜ್ಜರ ಸಲಹೆಗಾಗಿ ಮುಖ್ಯ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.Corona test – Mysore- Dasara-elephants

ಅರಮನೆಗೆ ಬಂದ ನಂತರ ಪರೀಕ್ಷೆ ಮಾಡಿಸಬೇಕಾ  ಅಥವಾ ಮೊದಲೇ ಪರೀಕ್ಷೆ ಮಾಡಿಸಬೇಕಾ .ಈ ಬಗ್ಗೆ ತಜ್ಞರ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಂ.ಸಿ ಅಲೆಗ್ಸಾಂಡರ್ ಸ್ಪಷ್ಟನೆ ನೀಡಿದ್ದಾರೆ.

Key words: Corona test – Mysore- Dasara-elephants