Monday, October 12, 2026

Dasara Wishes

ನಟ ದರ್ಶನ್ ಗೆ ಜೈಲೇ ಗತಿ: ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ DasraWishes_JK DasraWishes JK
Happy Dasara
Home Front Page ಕಂಪ್ಲೀಟ್ ಲಾಕ್ ಡೌನ್ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ…

ಕಂಪ್ಲೀಟ್ ಲಾಕ್ ಡೌನ್ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ…

ಬೆಂಗಳೂರು, ಮೇ,6,2021(www.justkannada.in): ರಾಜ್ಯದಲ್ಲಿ ಕೊರೋನಾ ತಡೆಗಾಗಿ ಜನತಾ ಕರ್ಫ್ಯೂ ಜಾರಿ ಮಾಡಲಾಗಿದ್ದು  ಆದರೂ ಸಹ ಕೊರೊನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಕಂಪ್ಲೀಟ್ ಲಾಕ್ ಡೌನ್ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.jk

ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ರಾಜ್ಯದಲ್ಲಿ ಮಹಾರಾಷ್ಟ್ರ ಮಾದರಿಯ ಲಾಕ್ ಡೌನ್ ಮಾಡುವ ಅನಿವಾರ್ಯತೆ ಇದೆ. ಸಣ್ಣ ಲಾಕ್ ಡೌನ್ ನಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕು ಹರಡುತ್ತಿದೆ ಕಂಪ್ಲೀಟ್ ಲಾಕ್ ಡೌನ್ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದ್ದಾರೆ.corona-seriously-about-complete-lockdown-union-minister-dv-sadananda-gowda

ಇದೇ ವೇಲೆ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಡಿ.ವಿ ಸದಾನಂದಗೌಡರು, ಸಿದ್ಧರಾಮಯ್ಯ ಕೊರೋನಾ ಬಂದು ಪೇಷೆಂಟ್ ಆಗಿದ್ದಾರಾ..? ಇಲ್ಲಾ ಮಾನಸಿಕ ಪೇಷೆಂಟ್ ಆಗಿದ್ದಾರಾ ಗೊತ್ತಿಲ್ಲ.  ಬೆಳಿಗ್ಗೆಯಿಂದ ಸಂಜೆವರೆಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Key words: corona- seriously –about- Complete Lockdown-Union Minister- DV Sadananda Gowda.