ಮೈಸೂರಿನಲ್ಲಿ ಕೊರೋನಾ ರಣಕೇಕೆ:  ಮತ್ತೊಂದು ರಸ್ತೆ ಸೀಲ್ ಡೌನ್…

ಮೈಸೂರು,ಜೂ,27,2020(www.justkannada.in): ಮೈಸೂರಿನಲ್ಲಿ ದಿನ ಕಳೆದಂತೆ ಕೊರೊನಾ ವೈರಸ್ ಸೋಂಕು ಮತ್ತಷ್ಟು ಹೆಚ್ಚುತ್ತಿದ್ದು ಈ ನಡುವೆ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇದೀಗ ದೇವರಾಜ ಮೊಹಲ್ಲಾದಲ್ಲಿ ಮತ್ತೊಂದು ರಸ್ತೆ ಸೀಲ್ ಡೌನ್‌ ಮಾಡಲಾಗಿದೆ.

ನಗರದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾದಂತೆ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು, ದಿನದಿಂದ ದಿನಕ್ಕೆ ಸೀಲ್ ಡೌನ್ ಆಗುತ್ತಿರುವ  ಪ್ರದೇಶಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇನ್ನು ಮೈಸೂರಿನ‌ ಹೃದಯ ಭಾಗದಲ್ಲಿರುವ ದೇವರಾಜ ಮೊಹಲ್ಲಾದಲ್ಲಿ  ಕೊರೊನಾ ರಣಕೇಕೆ ಹಾಕುತ್ತಿದ್ದು, ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಪರಿಣಾಮ ದೇವರಾಜ ಮೊಹಲ್ಲಾದಲ್ಲಿ ಮೂರು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು.corona-mysore-another-road-seal-down

ಕೊರೊನಾ ಸೋಂಕಿನಿಂದಾಗಿ ಇದೀಗ ಮತ್ತೊಂದು ರಸ್ತೆಯೂ ಸೀಲ್ ಡೌನ್ ಆಗಿದ್ದು ದೇವರಾಜ ಮೊಹಲ್ಲಾದಲ್ಲಿ ನಾಲ್ಕು ರಸ್ತೆಗಳು ಸೀಲ್ ಡೌನ್ ಆದಂತಾಗಿದೆ. ದೇವರಾಜ ಮೊಹಲ್ಲಾದ ಬಿಡಾರಾಂ ಕೃಷ್ಣಪ್ಪ ರಸ್ತೆಯ ಕೆಲ ಭಾಗ ಸೀಲ್ ಡೌನ್ ಮಾಡಲಾಗಿದೆ.

Key words: Corona – Mysore-Another road – seal down.