Tuesday, August 4, 2026

BDA Apartments

Home Front Page ಇನ್ಮುಂದೆ ಮಾಸ್ಕ್ ಹಾಕದೇ ಓಡಾಡಿದ್ರೆ ಒಂದು ಸಾವಿರ ರೂ. ದಂಡ- ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ…

ಇನ್ಮುಂದೆ ಮಾಸ್ಕ್ ಹಾಕದೇ ಓಡಾಡಿದ್ರೆ ಒಂದು ಸಾವಿರ ರೂ. ದಂಡ- ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ…

ಬೆಂಗಳೂರು,ಅಕ್ಟೋಬರ್,2,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದ್ದು ಇದೀಗ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಭಾರಿ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.jk-logo-justkannada-logo

ಹೌದು ನಗರ ಪ್ರದೇಶ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಗೆ ಒಂದು ಸಾವಿರ ರೂ. ದಂಡ ಹಾಗೂ ಗ್ರಾಮೀಣ ಭಾಗದಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ 500 ರೂ ದಂಡ ವಿಧಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಗರ ವ್ಯಾಪ್ತಿಯಲ್ಲಿ ಸಾವಿರ ರೂ. ಪಾಲಿಕೆ ವ್ಯಾಪ್ತಿ ಹೊರತುಪಡಿಸಿ ಬೇರೆ ಕಡೆ 500 ರೂ ದಂಡ ವಿಧಿಸಲು  ಇಂದಿನಿಂದ ತಕ್ಷಣ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.corona-mask-fine-thousand-official-order-state-government

ಈ ಮೂಲಕ ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಓಡಾಡುವವರು ಬಾರಿ ದಂಡ ಕಟ್ಟಬೇಕಾಗುತ್ತದೆ ಎಂಬುದನ್ನ ಸರ್ಕಾರ ಎಚ್ಚರಿಕೆ ನೀಡಿದೆ.

Key words: -corona-mask –fine- thousand- Official order – State Government.