ಕೊರೊನಾ ಕಡಿಮೆಯಾಗಿದೆ ಎಂದು ಅನ್ ಲಾಕ್ ಮಾಡಿದ್ರೆ ಅನಾಹುತ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ.

ಬೆಂಗಳೂರು,ಮೇ,31,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗಿದೆ ಎಂದು ಅನ್ ಲಾಕ್ ಮಾಡಿದರೇ ಅನಾಹುತ ಆಗಲಿದೆ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.jk

ಲಾಕ್ ಡೌನ್ ವಿಸ್ತರಣೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರ ಇನ್ನೂ ಒಂದು ವಾರ ಅಥವಾ 10 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವುದು ಉತ್ತಮ. ರಾಜ್ಯ ಸರ್ಕಾರ ಕೊರೊನಾ ಸ್ಥಿತಿಗತಿ ಬಗ್ಗೆ ಈಗಲಾದರೂ ಎಚ್ಚೆತ್ತು ಕೆಲ ದಿನಗಳವರೆಗೆ ಲಾಕ್ ಡೌನ್ ಮಾಡಿರುವುದರಿಂದ ಸೋಂಕಿತರ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಈಗಲೇ ಲಾಕ್ ಡೌನ್ ತೆರವು ಸರಿಯಲ್ಲ ಎಂದರು.

ಸೋಂಕು ಕಡಿಮೆಯಾಗಿದೆ ಎಂದು ಈಗಲೇ ಅನ್ ಲಾಕ್ ಮಾಡಿದರೆ  ರಾಜ್ಯದಲ್ಲಿ ರಾಜ್ಯದಲ್ಲಿ ಮಹಾ ಯಡವಟ್ಟು ಆಗುತ್ತೆ. ಜನರ ಹಿತದೃಷ್ಟಿಯಿಂದ ಇನ್ನೂ ಒಂದು ವಾರವಾದರೂ ಕಠಿಣ ಲಾಕ್ ಡೌನ್ ವಿಸ್ತರಣೆ ಅಗತ್ಯವಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Key words: corona- lockdown-Unlock – former CM- HD Kumaraswamy -warns