ಕೊರೊನಾ ಕಡಿಮೆಯಾಗದೇ  ಅನ್ ಲಾಕ್ ಸೂಕ್ತವಲ್ಲ- ಸಚಿವ ಆರ್.ಅಶೋಕ್ ಅಭಿಪ್ರಾಯ.

ಬೆಂಗಳೂರು,ಮೇ,31,2021(www.justkannada.in):  ರಾಜ್ಯದಲ್ಲಿ ಕೊರೋನಾ ಸಂಖ್ಯೆ ಕಡಿಮೆಯಾಗದೇ ಅನ್ ಲಾಕ್ ಸೂಕ್ತವಲ್ಲ. ಹಂತ ಹಂತವಾಗಿ ಅನ್ ಲಾಕ್ ಮಾಡುವುದು ಉತ್ತಮ ಎಂದು ಕಂದಾಯ ಸಚಿವ ಆರ್.ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್,  ಏಕಾಏಕಿ ಲಾಕ್ ಡೌನ್ ತೆರವುಗೊಳಿಸಿವುದು ಬೇಡ. ಹಂತ ಹಂತವಾಗಿ ಅಲ್ ಲಾಕ್ ಮಾಡುವುದು ಸೂಕ್ತ. ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ 500ಕ್ಕೆ ಇಳಿಯಬೇಕು ರಾಜ್ಯದಲ್ಲಿ 3 ರಿಂದ 4 ಸಾವಿರಕ್ಕೆ ಕೋವಿಡ್ ಸಂಖ್ಯೆ ಇಳಿಯಬೇಕು. ಹೀಗಾಗಿ ಏಕಾ ಏಕಿ ಅನ್ ಲಾಕ್ ಬೇಡ ಎಂದರು.

ಸೋಂಕಿತರ ಸಂಖ್ಯೆ ಕಡಿಮೆಯಾದರೇ ಅನ್ ಲಾಕ್. ಮಾಡಲಾಗುವುದು. ತಾಂತ್ರಿಕ ಸಲಹಾ ಸಮಿತಿ ವರದಿ ಕುರಿತು ಸಿಎಂ, ಎಲ್ಲಾ ಸಚಿವರು ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರ್.ಅಶೋಕ್ ತಿಳಿಸಿದರು.

Key words:  corona –lockdown-continue- Minister -R. Ashok.