ವ್ಯಕ್ತಿ ಮೃತಪಟ್ಟ ಬಳಿಕ ಕೊರೋನಾ ಸೋಂಕು ದೃಢ…

ಮೈಸೂರು,ಜು,28,2020(www.justkannada.in):  ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು ವ್ಯಕ್ತಿ ಸತ್ತ ನಂತರ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.jk-logo-justkannada-logo

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಕುಕ್ಕೂರು ಗ್ರಾಮದ ನಿವಾಸಿ ತಾಂಡವಮೂರ್ತಿ (45)ಮೃತಪಟ್ಟಿದ್ದು ತಾಂಡವಮೂರ್ತಿ ಸಾವನ್ನಪ್ಪಿದ ಬಳಿಕ ಕೊರೋನಾ ಸೋಂಕು ಇರುವುದು ದೃಢವಾಗಿದೆ. corona-infection-person-after-died-mysore

ಕೆಲ ದಿನಗಳಿಂದ ಅನಾರೋಗ್ಯದ ಸಮಸ್ಯಯಿಂದ ಕುಕ್ಕೂರು ಗ್ರಾಮದ ನಿವಾಸಿ ತಾಂಡವಮೂರ್ತಿ ಬಳಲುತ್ತಿದ್ದರು. ಮಳವಳ್ಳಿ ತಾಲ್ಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಸ್ತಮಾ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ತಾಂಡವಮೂರ್ತಿಸಾವನ್ನಪ್ಪಿದ್ದು, ಸತ್ತ ನಂತರ ಕೊರೋನಾ ಪಾಸಿಟಿವ್ ಬಂದಿದೆ. ಮೃತ ವ್ಯಕ್ತಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ಹಲವರ ಜೊತೆ ಸಂಪರ್ಕದಲ್ಲಿದ್ದರು. ಹೀಗಾಗಿ ಇದೀಗ ಹಲವು ಜನರಲ್ಲಿ ಆತಂಕ ಮನೆ ಮಾಡಿದೆ.

Key words: Corona- infection – person -after – died-mysore