Saturday, September 12, 2026

BDA Apartments

Home Front Page ಸರಕು ಸಾಗಣೆ ವಿಮಾನವನ್ನು ಚೀನಾಕ್ಕೆ ಚಲಾಯಿಸಿದ್ದ ಏರ್‌ ಇಂಡಿಯಾದ ಪೈಲಟ್‌ಗಳಿಗೆ ಕೊರೊನಾ ಸೋಂಕು

ಸರಕು ಸಾಗಣೆ ವಿಮಾನವನ್ನು ಚೀನಾಕ್ಕೆ ಚಲಾಯಿಸಿದ್ದ ಏರ್‌ ಇಂಡಿಯಾದ ಪೈಲಟ್‌ಗಳಿಗೆ ಕೊರೊನಾ ಸೋಂಕು

ನವದೆಹಲಿ, ಮೇ 10, 2020 (www.justkannada.in)ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಐವರು ಪೈಲಟ್‌ಗಳಿಗೆ ಕೋವಿಡ್-19 ಸೋಂಕು ತಗುಲಿದೆ. ಇವರೆಲ್ಲ ಮುಂಬೈಯವರಾಗಿದ್ದಾರೆ.

ಪೈಲಟ್‌ಗಳಿಗೆ ಸೋಂಕು ತಗುಲಿರುವುದು ವಿಮಾನ ಹಾರಾಟ ನಡೆಸುವುದಕ್ಕೂ 72 ಗಂಟೆಗಳ ಮೊದಲು ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇವರ್‍ಯಾರಲ್ಲೂ ಸೋಂಕಿನ ಲಕ್ಷಣಗಳು ಇರಲಿಲ್ಲ.

ಇವರು ಸರಕುಸಾಗಣೆ ವಿಮಾನವನ್ನು ಚೀನಾಕ್ಕೆ ಚಲಾಯಿಸಿದ್ದರು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.