ಕೊರೋನಾ ನಿಗ್ರಹಕ್ಕೆ ನಟ ಪ್ರೇಮ್ ಮೈಸೂರಿನಲ್ಲಿ ಮಾಡಿದ್ದೇನು ಗೊತ್ತ…?

ಮೈಸೂರು,ಮಾ,20,2020(www.justkannada.in):  ಎಲ್ಲೆಡೆ ಕೊರೊನಾ ವೈರಸ್ ಸೋಂಕು  ಹರಡುವ ಭೀತಿ ಹೆಚ್ಚಾಗಿದ್ದು ಈ ನಡುವೆ ನಟ ನೆನಪಿರಲಿ ಪ್ರೇಮ್ ಕೊರೊನಾ ನಿಗ್ರಹಕ್ಕೆ ದೇವರ ಮೊರೆ ಹೋಗಿದ್ದಾರೆ.

ನೆನಪಿರಲಿ ಪ್ರೇಮ್‌ ಇಂದು ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿ‌ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.  ನೆನ್ನೆಯಷ್ಟೇ ನಟ ಪ್ರೇಮ್  ಮಂತ್ರಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ವಾಪಸ್ ಆಗಿದ್ದರು.

ಇದೀಗ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಪ್ರೇಮ್ ಭೇಟಿ ನೀಡಿದ್ದು ಕೊರೊನಾದಿಂದ ಮುಕ್ತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Key words: corona horror- actor- prem-visit- mysore- chamundi hill- special worship