ಕೊರೋನಾ ಸಂಕಷ್ಟದಲ್ಲೂ ಸಿಎಂ ಬಿಎಸ್ ವೈರಿಂದ ಜನಪರ ಬಜೆಟ್- ಮುಡಾ ಅಧ್ಯಕ್ಷ ರಾಜೀವ್…

ಮೈಸೂರು,ಮಾರ್ಚ್,8,2021(www.justkannada.in): ಕೊರೋನಾ ಕಷ್ಟ ಕಾಲದಲ್ಲೂ, ಆರ್ಥಿಕ ಚೇತರಿಕೆ ಆಗದ ಸಂದರ್ಭದಲ್ಲೂ ಜನಪರ ಬಜೆಟ್ ಮಂಡನೆ ಮಾಡಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್ ತಿಳಿಸಿದ್ದಾರೆ.jk

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ  ಮುಡಾ ಅಧ್ಯಕ್ಷ ರಾಜೀವ್,  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಡುವಂತೆ ಎಲ್ಲ ಶಾಸಕರು ಸಂಸದರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆವು. ಅದಕ್ಕೆ ಪೂರಕವಾಗಿ ಮೂಡಾ ವ್ಯಾಪ್ತಿಗೆ ಹಾಗೂ ಹೊರ ವಲಯಗಳನ್ನು ಜಲಮಂಡಳಿ ವ್ಯಾಪ್ತಿಗೆ ಸೇರಿಸಿರುವುದು ಸಂತೋಷವಾಗಿದೆ. ಮೈಸೂರು ನಗರ ಮತ್ತು ಹೊರ ವಲಯಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಇದು ಸಹಕಾರಿ ಆಗಲಿದೆ ಎಂದರು.

ಈ ಬಾರಿ ಬಜೆಟ್‌ನಲ್ಲಿ ಮೈಸೂರು ಸೇರಿದಂತೆ ಇತರ ನಗರಗಳಿಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಐದು ಕೋಟಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ತಾತ್ಕಾಲಿಕ ವಸತಿಗೃಹ ನಿರ್ಮಾಣ. ಕಬಿನಿ ಅಣೆಕಟ್ಟು ಅಭಿವೃದ್ಧಿ 50 ಕೋಟಿ ಅನುದಾನ, ಕಿದ್ವಾಯ್ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣ, ಬುದ್ದಿಮಾಂದ್ಯರ ಆರೈಕೆಗೆ ಮಾಸಾಶನವನ್ನು 1400 ರಿಂದ 2000 ಸಾವಿರಕ್ಕೆ ಹೆಚ್ವಿಸಲಾಗಿದೆ ಎಂದು ರಾಜೀವ್ ತಿಳಿಸಿದರು.HV Rajiv -appointed –mysore Muda- president

ಎಸ್ ಎಲ್ ಬೈರಪ್ಪ ಆವರ ಪರ್ವ ನಾಟಕ ರಾಜ್ಯದಾದ್ಯಂತ ಪ್ರದರ್ಶನಕ್ಕೆ  ಒಂದು ಕೋಟಿ ರೂ. ನೀಡಲಾಗಿದೆ. 35 ಲಕ್ಷ ರೂ ಗಳಿಂದ 45 ಲಕ್ಷ ರೂ.ಗಳ ವರೆಗಿನ ಮೌಲ್ಯದ ಅಪಾರ್ಟಮೆಂಟ್ ಮೊದಲ ನೋಂದಣಿ ಮುದ್ರಾಂಕ ಶುಲ್ಕ ಶೇ 5ರಿಂದ 3 ಕ್ಕೆ ಇಳಿಸಲಾಗಿದೆ. ಎಲ್ಲ ವರ್ಗದ ಜನರನ್ನ ಗಮನದಲ್ಲಿಟ್ಟುಕೊಂಡು ಬಜೆಟ್ ನೀಡಿದ್ದಾರೆ. ನಾವು ಪ್ರತ್ಯೇಕ ಜಲಮಂಡಳಿಗೆ ಮನವಿ ಮಾಡಿದ್ದೆವು.  ಆದರೆ ಎಲ್ಲಾ ಜಿಲ್ಲೆಗಳಿಂದ ಇದೇ ಬೇಡಿಕೆ  ಬರುತ್ತೆ ಅಂತ ಹೇಳಿ ಅದಕ್ಕೆ ಪೂರಕವಾಗಿ ಕರ್ನಾಟಕದ ಜಲಮಂಡಳಿ ವ್ಯಾಪ್ತಿಗೆ ಸೇರಿಸಲಾಗಿದೆ. ಹೀಗಾಗಿ ಯಡಿಯೂರಪ್ಪರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜೀವ್ ತಿಳಿಸಿದರು.

Key words: Corona Hardship -Population -Budget -MUDA President –HV Rajiv