ನೋ ಬರ್ತ್ ಡೇ ಸೆಲೆಬ್ರೆಷನ್ ಎಂದ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು, ಜೂನ್ 26, 2020 (www.justkannada.in): ಸ್ಯಾಂಡಲ್ ವುಡ್ ಸ್ಟಾರ್ ನಟರ ಬರ್ತ್ ಡೇ ಆಚರಣೆಗೂ ಕೋವಿಡ್-19 ವೈರಸ್ ಭೀತಿ ಬ್ರೇಕ್ ಹಾಕಿದೆ.

ಇದೀಗ ಗಣೇಶ್ ಕೂಡಾ ಇದೇ ಹಾದಿಯಲ್ಲಿ ನಡೆದಿದ್ದಾರೆ. ಜುಲೈ 4 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬವಿದೆ. ಆದರೆ ಈ ಬಾರಿ ಜನ್ಮ ದಿನವನ್ನು ಗ್ರ್ಯಾಂಡ್ ಆಗಿ ಆಚರಿಸದಿರಲು ಗೋಲ್ಡನ್ ಸ್ಟಾರ್ ನಿರ್ಧರಿಸಿದ್ದಾರೆ.

ಈ ಬಗ್ಗೆ ಅಭಿಮಾನಿಗಳಿಗೂ ಮನವಿ ಮಾಡಿದ್ದು ಯಾರು ಮನೆ ಬಳಿ ಬಾರದಂತೆ ಕೋರಿದ್ದಾರೆ. ಮಡದಿ, ಮಕ್ಕಳೊಂದಿಗೆ ಸಿಂಪಲ್ ಆಗಿ ಬರ್ತ್ ಡೇ ಸೆಲೆಬ್ರೆಟ್ ಮಾಡಲಿದ್ದಾರೆ.