ಮೈಸೂರಿನ ಇನ್ಫೋಸೀಸ್ ಗೆ ತಟ್ಟಿದ ಕೊರೋನಾ ಎಫೆಕ್ಟ್…

ಮೈಸೂರು,ಮಾ,20,2020(www.justkannada.in): ಈಗಾಗಲೇ ದೇಶದಲ್ಲಿ ಐದು ಬಲಿ ಪಡೆದಿರುವ ಕೊರೋನಾ ವೈರಸ್ ಭೀತಿ ಕರ್ನಾಟಕದಲ್ಲೂ ಹೆಚ್ಚಾಗಿದೆ. ಈ ನಡುವೆ ಕೊರೋನಾ ಭೀತಿ ಸಾಂಸ್ಕೃತಿಕ ನಗರಿ ಮೈಸೂರಿಗೂ ತಟ್ಟಿದೆ.

ಹೌದು, ಕೊರೋನಾ ವೈರಸ್ ಹರಡುವ ಆತಂಕ ಹಿನ್ನೆಲೆ ಮೈಸೂರಿನ ಇನ್ಫೋಸಿಸ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ತರಬೇತಿ ಪಡೆಯುತ್ತಿದ್ದ ಇನ್ಫೋಸಿಸ್ ಟೆಕ್ಕಿಗಳನ್ನ ಅವರ ಊರಿಗೆ ವಾಪಸ್ ಕಳುಹಿಸಲಾಗಿದೆ. ಇನ್ಫೋಸಿಸ್ ಗ್ಲೋಬಲ್ ಎಜ್ಯುಕೇಷನ್ ಸೆಂಟರ್ ನಲ್ಲಿ  10 ಸಾವಿರ ಟೆಕ್ಕಿಗಳು ತರಬೇತಿ ಪಡೆಯುತ್ತಿದ್ದರು.

ಈ ನಡುವೆ ಕೊರೋನಾ ವೈರಸ್ ಭೀತಿ ಹಿನ್ನೆಲೆ ಇನ್ಫೋಸಿಸ್ ನಲ್ಲಿ ತರಬೇತಿ ಪಡೆಯುತ್ತಿದ್ದ 4 ಸಾವಿರ ಟೆಕ್ಕಿಗಳನ್ನ ವಾಪಸ್ ಕಳುಹಿಸಲಾಗಿದೆ.  ಪುಣೆ, ಹೈದರಾಬಾದ್, ಬೆಂಗಳೂರು ಸೇರಿ ಇತರೆಡೆಗೆ ಟೆಕ್ಕಿಗಳು ವಾಪಸ್ ಆಗಿದ್ದಾರೆ. ಸರ್ಕಾರಿ ಬಸ್ ಹಾಗೂ ಸಂಸ್ಥೆಯ ವಾಹನಗಳಲ್ಲಿ ಟೆಕ್ಕಿಗಳು ತಮ್ಮ ಊರಿಗೆ ತೆರಳಿದ್ದು, ಹೀಗಾಗಿ ಇನ್ಫೋಸಿಸ್ ಖಾಲಿ ಖಾಲಿಯಾಗಿದೆ.

Key words: Corona Effect – Infosys – Mysore.