ವಿವಾಹ ವಾರ್ಷಿಕೋತ್ಸವಕ್ಕಾಗಿ ವಿದೇಶಕ್ಕೆ ತೆರಳಿದ್ದ ದಂಪತಿಯ ಪರದಾಟ…

ಬೆಂಗಳೂರು,ಮಾ,21,2020(www.justkannada.in): ದೇಶದಲ್ಲಿ ಕೊರೋನಾ ವೈರಸ್ ಹರಡುವ ಭೀತಿ ಹೆಚ್ಚಾದ ಹಿನ್ನೆಲೆ,ಸೋಂಕು ಹರಡುವುದನ್ನ ತಡೆಗಟ್ಟಲು ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್ ಮಾಡುವ ಮೂಲಕ  ಬಿಗಿ ಕ್ರಮ ಕೈಗೊಂಡಿದೆ.

ಇದರಿಂದಾಗಿ ವಿವಾಹ ವಾರ್ಷಿಕೋತ್ಸವಕ್ಕೆಂದು ವಿದೇಶಕ್ಕೆ ತೆರಳಿದ್ದ ಬೆಂಗಳೂರು ಮೂಲದ ದಂಪತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಭಾರತಕ್ಕೆ ವಾಪಸ್ ಬರಲು ಸಾಧ್ಯವಾಗದೇ ವಿದೇಶದಲ್ಲೇ ದಂಪತಿಗಳು ಪರದಾಡುತ್ತಿದ್ದು ತಮ್ಮನ್ನ ಭಾರತಕ್ಕೆ ಕರೆಸಿಕೊಳ್ಳಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ವಿದ್ಯಾರಣ್ಯಪುರಂ ನಿವಾಸಿಗಳಾದ  ಪ್ರತಾಪ್ ತನ್ನ ಪತ್ನಿ ಅಮೂಲ್ಯರ ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಮಾರ್ಚ್ 9 ರಂದು ಮ್ಯಾಡ್ರಿಡ್ ಗೆ ತೆರಳಿದ್ದರು. ಇದೀಗ ತನ್ನ ತವರು ಭಾರತಕ್ಕೆ ವಾಪಸ್ ಆಗಲು ವಿಮಾನವಿಲ್ಲದೆ ದಂಪತಿ ಪರದಾಡುತ್ತಿದ್ದಾರೆ. ವಾಪಸ್ ಭಾರತಕ್ಕೆ ಕರೆಸಿಕೊಳ್ಳುವಂತೆ ಪತಿ ಮತ್ತು ಪತ್ನಿ ಇಬ್ಬರು ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ಹರಡದಂತೆ ತಡೆಯಲು ಮತ್ತಷ್ಟು ಬಿಗಿ ಕ್ರಮಕೈಗೊಂಡಿರುವ ಕೇಂದ್ರ ಸರ್ಕಾರ ಒಂದು ವಾರಗಳ ಕಾಲ ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್ ಮಾಡಿದೆ.

Key words: corona effect-couple – abroad – wedding anniversary-return-trouble