ಕೊರೊನಾ ಎಫೆಕ್ಟ್: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಂದ್

ಬೆಂಗಳೂರು, ಮಾರ್ಚ್ 15, 2020 (www.justkannada.in): ಕೊರೊನ ಭೀತಿ ಹಿನ್ನೆಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಂದ್ ಮಾಡಲಾಗಿದೆ.

ಇಂದಿನಿಂದ ಮಾರ್ಚ್ 22 ವರಗೆ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ. ಕಾಡಂಚಿನ ಎಲ್ಲ ಹೋಟೆಲ್ ,ರೆಸಾರ್ಟ್ ಮುಚ್ಚಲು ಜಿಲ್ಲಾಧಿಕಾರಿಗಳ ಸೂಚನೆ ನೀಡಿದ್ದಾರೆ.

ವಿದೇಶಿಗರು ಸೇರಿದಂತೆ ಸಾಕಷ್ಟು ಪ್ರವಾಸಿಗರು ಬಂಡೀಪುರಕ್ಕೆ ಆಗಮಿಸುತ್ತಿದ್ದರು. ಹೀಗಾಗಿ ಕರೋನೊ ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.