ಕೊರೊನಾ‌ ಔಷಧಿ ಕೊರತೆ ನೀಗಿಸುವಂತೆ ಸಿಎಂಗೆ ಪತ್ರ ಬರೆದ ಶಾಸಕ ಎಸ್.ಎ ರಾಮದಾಸ್…

ಮೈಸೂರು,14,2021(www.justkannada.in):  ರಾಜ್ಯದಲ್ಲಿ ಅಕ್ಸಿಜನ್ ಕೊರತೆ ಆಯ್ತು, ಲಸಿಕೆ ಕೊರತೆ ಆಯ್ತು, ಇದೀಗಾ ಕೊರೊನಾ ಔಷಧಿ ಕೊರತೆ ಉಂಟಾಗಿದೆ. ಹೌದು, ಮೈಸೂರಿನಲ್ಲಿ ಕೊರೋನಾ ಔಷಧಿಗೆ ಕೊರತೆ ಉಂಟಾಗಿದೆ. ಹೀಗಾಗಿ ಕೊರೊನಾ‌ ಔಷಧಿ ಕೊರತೆ ನೀಗಿಸುವಂತೆ ಸಿಎಂ  ಬಿಎಸ್ ಯಡಿಯೂರಪ್ಪಗೆ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪತ್ರ ಬರೆದು ಮನವಿ ಮಾಡಿದ್ದಾರೆ.jk

ಈ ಸಂಬಂಧ ಪತ್ರ ಬರೆದಿರುವ ಶಾಸಕ ರಾಮದಾಸ್,  ಮೈಸೂರಿನಲ್ಲಿ‌ ಕೊರೊನಾ‌ ಔಷಧಗಳ ಬಾರಿ ಕೊರತೆ ಉಂಟಾಗಿದೆ. ಮೈಸೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ. ಈ ಸಂಬಂಧ ಮೇ 5 ಹಾಗೂ 13 ರಂದು ಅಧಿಕಾರಿಗಳು ಸಂಬಂಧಪಟ್ಟವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಈ ಕೊರತೆಯನ್ನು ಶೀಘ್ರದಲ್ಲಿ ನಿವಾರಣೆ ಮಾಡಬೇಕು ಮನವಿ ಮಾಡಿದ್ದಾರೆ.Corona -drug –shortage-MLA- SA Ramadas-letter -CM

ಕೋವಿಡ್ ಮೊದಲನೆ ಅಲೆ ಸಂಧರ್ಭದಂತೆ ಕೆ.ಟಿ.ಪಿ.ಪಿ ಕಾಯ್ದೆಯ ಅಡಿ ಔಷಧಿ ಖರೀದಿ ಮಾಡಬೇಕು. ಯಾವುದೇ ಟೆಂಡರ್ ಕರೆಯದೆ ಔಷಧಿ ಖರೀದಿ‌ ಮಾಡಿ ಪೂರೈಕೆ ಮಾಡಿ. ಇದಕ್ಕಾಗಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಶಾಸಕ ಎಸ್.ಎ ರಾಮದಾಸ್ ಮನವಿ ಮಾಡಿದ್ದಾರೆ.

Key words: Corona -drug –shortage-MLA- SA Ramadas-letter -CM