ರಾಜ್ಯ ಸರ್ಕಾರದಿಂದ ಕರ್ಫ್ಯೂ ಹಿನ್ನೆಲೆ:  ಏ.24 ರಂದು ಮೈಸೂರಿನ ಐಶ್(AIISH) ಓಪನ್ ಇರಲ್ಲ…

ಮೈಸೂರು,ಏಪ್ರಿಲ್,22,2021(www.justkannada.in):  ರಾಜ್ಯದಲ್ಲಿ  ಹೆಚ್ಚುತ್ತಿರುವ ಕೊರೋನಾ 2ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ  ಮತ್ತು ವಿಕೇಂಡ್ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆ ಏಪ್ರಿಲ್ 24 ರಂದು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH) ಮುಚ್ಚಿರಲಿದ್ದು ಯಾವುದೇ ಚಿಕಿತ್ಸಾ ಸೌಲಭ್ಯಗಳು ಇರುವುದಿಲ್ಲ.jk

ಕೊರೊನಾ ನಿಯಂತ್ರಣಕ್ಕಾಗಿ 20.04.2021ರ ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಆರ್‌ಡಿ 158 ಟಿಎನ್‌ಆರ್ 2020 ರ ಆದೇಶದಂತೆ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ವೀಕೆಂಡ್ ಕರ್ಫ್ಯೂ ಘೋಷಿಸಲಾಗಿದೆ. ಈ ಆದೇಶದಿಂದಾಗಿ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಮೈಸೂರು 2021 ರ ಏಪ್ರಿಲ್ 24 ರ ಶನಿವಾರ ಮುಚ್ಚಲ್ಪಟ್ಟಿದೆ ಎಂದು ಮಾಹಿತಿ ಲಭ್ಯವಾಗಿದೆ.corona Curfew - State Government- april 24-AIISH-close

Key words: corona Curfew – State Government- april 24-AIISH-close