ಎನ್. ಆರ್ ಕ್ಷೇತ್ರದಲ್ಲಿ ಕೊರೋನಾ ಪ್ರಕರಣ ಹೆಚ್ಚಾದ ಹಿನ್ನೆಲೆ: ಸ್ವತಃ ಫೀಲ್ಡಿಗಿಳಿದ ಶಾಸಕ ತನ್ವೀರ್ ಸೇಠ್…

ಮೈಸೂರು,ಜು,25,2020(www.justkannada.in):  ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು ನಿನ್ನೆ ಒಂದೇ ದಿನ 281  ಕೋವಿಡ್ ಪ್ರಕರಣ ಪತ್ತೆಯಾಗಿತ್ತು . ಈ ನಡುವೆ ನಗರದ ಎನ್. ಆರ್ ಕ್ಷೇತ್ರದಲ್ಲೂ ಹೆಚ್ಚು ಕೊರೋನಾ ಪ್ರಕರಣ ಕಂಡು ಬರುತ್ತಿರುವ ಹಿನ್ನೆಲೆ ಅನಾರೋಗ್ಯದಿಂದ ದೂರ ಉಳಿದಿದ್ದ ಕ್ಷೇತ್ರದ ಶಾಸಕ ತನ್ವೀರ್ ಸೇಠ ಇದೀಗ ಫೀಲ್ಡ್ ಗಿಳಿದಿದ್ದಾರೆ.

ಎನ್ ಆರ್ ಕ್ಷೇತ್ರದಲ್ಲಿ ಕೊರೋನ ಪ್ರಕರಣ ಹೆಚ್ಚಾದ ಹಿನ್ನೆಲೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ  ಶಾಸಕ ತನ್ವೀರ್ ಸೇಠ್ ಚರ್ಚೆ ನಡೆಸಿದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಒಂದು ಘಟನೆ ನಾನು ಕ್ಷೇತ್ರದಿಂದ ದೂರ ಉಳಿಯುವಂತೆ ಆಯ್ತು. ಒಂದು ಭಾಗದಲ್ಲಿ ಜಾಸ್ತಿ ಆಗ್ತಿದೆ. ಸ್ಥಳೀಯ ನಾಯಕರು ಅವರ ಕಾರ್ಯ ಮಾಡುತ್ತಿದ್ದಾರೆ. ಕೊರೋನಾದಿಂದ ಜನರಿಗೆ ಭಯದ ವಾತಾವರಣ ಇದೆ‌. ಅದನ್ನ ಹೊಗಲಾಡಿಸಲು ಜಿಲ್ಲಾಡಳಿತ ಎಲ್ಲಾ ಕೆಲಸ ಮಾಡುತ್ತಿದೆ. ನನ್ನ ಒಂದು ಘಟನೆಯಿಂದ ಕ್ಷೇತ್ರದಿಂದ ದೂರ ಉಳಿಯುವತೆ ಮಾಡಿದೆ. ನನ್ನ ಆರೋಗ್ಯ ಏನೇ ಇದ್ದರೂ ಕೊರೋನಾ ನಿಯಂತ್ರಣಕ್ಕೆ ಕ್ಷೇತ್ರಕ್ಕೆ ಬಂದಿದ್ದೇನೆ. ಜನರಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನ ಮಾಡುತ್ತೇವೆ ಎಂದರು.corona case- Increase-NR constituency-MLS-  Tanveer sait

ದಿನ ನಿತ್ಯ ನಾನು ಜಿಲ್ಲಾಡಳಿತದ ಜೊತೆ ಸಂಪರ್ಕದಲ್ಲಿ ಇದ್ದೆ. ಜಿಲ್ಲಾ ಉಸ್ತುವಾರಿ ಸಚಿವರೊಡನೆ ಕೂಡ ದೂರವಾಣಿ ಸಂಪರ್ಕದಲ್ಲಿ ಇದ್ದೆ. ಕೊರೋನಾ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯ. ಖಾಸಗಿ ಆಸ್ಪತ್ರೆಗೆ ಬೇರೆ ರೋಗಿಗಳನ್ನು ಒಳರೋಗಿಯಾಗಿ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಕೋವಿಡ್ ಹಾಗೂ ನಾನ್ ಕೋವಿಡ್ ಆಸ್ಪತ್ರೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇನೆ. ಸ್ಥಳೀಯ ಮುಖಂಡರ ಜತೆ ಮಾತನಾಡುತ್ತೇನೆ.  ಇನ್ನೂ ಎರಡು ಖಾಸಗಿ ಕೋವಿಡ್ ಸೆಂಟರ್ ಮಾಡಲಾಗುತ್ತದೆ‌. ವೈದಕೀಯ ಸಿಬ್ಬಂದಿ ನೇಮಕ ಮಾಡಲಾಗುತ್ತೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಜಿಲ್ಲಾಡಳಿತ ನಿಮ್ಮ‌ಜೊತೆಗೆ ಇದೆ. ಇದು ರಾಜಕೀಯ ಮಾತನಾಡುವ ಸಂದರ್ಭ ಅಲ್ಲ. ನೀವು ಕೊರೋನಾ ಲಕ್ಷಣ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಕೊನೆ ಕ್ಷಣದವರೆಗೆ ಕಾಯಬೇಡಿ. ತಕ್ಷಣ ಮುಂದೆ ಬನ್ನಿ  ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕ್ಷೇತ್ರದ ಜನತೆಗೆ ಎನ್ ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮನವಿ ಮಾಡಿದರು.

Key words:  corona case- Increase-NR constituency-MLS-  Tanveer sait