ದೇಶದಲ್ಲಿ ಕೊರೋನಾ ಪ್ರಕರಣ ಇಳಿಕೆ: ಕಳೆದ 24 ಗಂಟೆಗಳಲ್ಲಿ 10,929 ಕೋವಿಡ್ ಪ್ರಕರಣ ಪತ್ತೆ.

ನವದೆಹಲಿ,ನವೆಂಬರ್,6,2021(www.justkannada.in):  ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು,  ಕಳೆದ 24 ಗಂಟೆಗಳಲ್ಲಿ ಹೊಸದಾಗಿ 10,929 ಕೋವಿಡ್ ಪ್ರಕರಣ ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ  ಮಾಹಿತಿ ನೀಡಿದ್ದು  ಕಳೆದ 24 ಗಂಟೆಗಳಲ್ಲಿ 392 ಮಂದಿ ಕೊರೋನಾಗೆ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 12,509 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಈವರೆಗೆ ಕೋವಿಡ್ ನಿಂದ 4.60 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.  ಕೋವಿಡ್ ಸೋಂಕಿನಿಂದ 3.37 ಕೋಟಿ ಮಂದಿ ಗುಣಮುಖರಾಗಿದ್ದಾರೆ.

ದೇಶಾದ್ಯಂತ ಈವರೆಗೆ 61.39 ಕೋಟಿ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪ್ರತಿದಿನದ ಪಾಸಿಟಿವಿಟಿ ದರ ಶೇ.1.35ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.1.27ರಷ್ಟಿದೆ ಎಂದು ಅಂಕಿಅಂಶ ಹೇಳಿದೆ. ಸತತ 29 ದಿನಗಳಿಂದ ದಿನಂ ಪ್ರತಿ 20,000ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗುತ್ತಿದೆ. ಅಲ್ಲದೇ ಕಳೆದ 132 ದಿನಗಳಿಂದ ಪ್ರತಿದಿನ 50,000ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪತ್ತೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Corona case- declines – country-10,929 -Covid case- detected

ENGLISH SUMMARY…

Corona cases decline: 10,929 new cases reported in the last 24 hours
New Delhi, November 6, 2021 (www.justkannada.in): The number of Corona cases in the country is declining. About 10,929 new cases were reported in the last 24 hours.
According to the information provided by the Union Health Ministry, 392 people lost their lives in the last 24 hours, and 12,509 people have recovered. The total number of people who lost their lives from COVID-19 is above 4.60 lakh. Meanwhile, a total number of 3.37 crore people have recovered.
COVID tests have been conducted on 61.39 crore people and the positivity rate is at 1.35%. The positivity rate this week is 1.27%. From the last 29 days, less than 20,000 new corona cases are reported across the country and lesser than 50,000 cases in the last 152 days.
Keywords: Corona cases/ decline/ country