ಕೊರೋನಾ ಕೇಸ್ ಇಳಿಮುಖ ಹಿನ್ನೆಲೆ: ಇಂದಿನಿಂದ ಹಂಪಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಅವಕಾಶ.

ಬಳ್ಳಾರಿ,ಜೂನ್,24,2021(www.justkannada.in):  ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾದ ಹಿನ್ನೆಲೆ ಅನ್ ಲಾಕ್ ಮಾಡಲಾಗಿದ್ದು, ಈ ನಡುವೆ ಇಂದಿನಿಂದ ಹಂಪಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.jk

ರಾಜ್ಯದಲ್ಲಿ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡಿದ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿತ್ತು. ಹೀಗಾಗಿ ಕಳೆದ ಒಂದುವರೆ ತಿಂಗಳಿನಿಂದ ಹಂಪಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಕೊರೋನಾ ಕೇಸ್ ಇಳಿಮುಖವಾಗಿ ಅನ್ ಲಾಕ್ ಆದ ಹಿನ್ನೆಲೆ ಇಂದಿನಿಂದಲೇ ಹಂಪಿ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಬೆಳಿಗೆ 6 ರಿಂದ ಸಂಜೆ 5 ಗಂಟೆವರೆಗೆ ವೀಕ್ಷಣೆಗೆ ಅನುಮತಿ ನೀಡಲಾಗಿದೆ. ಅನ್ ಲೈನ್ ಮೂಲಕವೂ ಟಿಕೆಟ್ ಪಡೆಯಬಹುದು. ಇನ್ನು ಸ್ಮಾರಕ ವೀಕ್ಷಣೆ ವೇಳೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ.

ENGLISH SUMMARY…

Declining number of Corona cases: Tourists allowed to visit ancient monuments in Hampi from today
Ballari, June 24, 2021 (www.justkannada.in): The State Government has started lifting the lockdown imposed in the State following a decline in a number of Corona cases. In the meantime, tourists are allowed to visit the ancient monuments in Hampi.
Tourists were prohibited to visit the historic monuments in Hampi due to the lockdown from the last one-and-a-half year. Following the lifting of lockdown in phases, the prohibition has also been lifted.
Tourists are allowed from 6.00 am to 5.00 pm. Tickets are also sold online. However, following COVID-19 guidelines like wearing a mask, maintaining social distance, etc.
Keywords: Corona cases/ Decline/ Tourists/ Hampi/

Key words: Corona case – Decline- Permission-Hampi –historical- monuments – today.