ಶೇ.50ರಷ್ಟು ಮಕ್ಕಳನ್ನು ಬಾಧಿಸಲಿದೆ ಕೊರೊನಾ 3ನೇ ಅಲೆ- ಮಕ್ಕಳ ತಜ್ಞ ಡಾ.ಎನ್.ಪ್ರದೀಪ್ ಎಚ್ಚರಿಕೆ…

ಮೈಸೂರು,ಮೇ,15,2021(www.justkannada.in): ಕೊರೊನಾ 3ನೇ ಬಹಳ ಪರಿಣಾಮಕಾರಿಯಾಗಿರಲಿದ್ದು, ಶೇ. 50ರಷ್ಟು ಮಕ್ಕಳನ್ನು ಬಾಧಿಸಲಿದೆ ಎಂದು ಮೈಸೂರಿನ ಚಲುವಾಂಬ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎನ್.ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.jk

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಕ್ಕಳ ತಜ್ಞ ಡಾ.ಎನ್.ಪ್ರದೀಪ್, ಮಕ್ಕಳಿಗೆ ವ್ಯಾಕ್ಸಿನೇಷನ್‌ ಆಗದೆ ಇರುವ ಹಿನ್ನೆಲೆ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ಪೋಷಕರು  ಕಾಳಜಿ ವಹಿಸಬೇಕು. ಕೊರೊನಾ 3ನೇ ಬಹಳ ಪರಿಣಾಮಕಾರಿಯಾಗಿರಲಿದೆ. ವಯಸ್ಕರಿಗೆ ಪಾಸಿಟಿವ್ ಬಂದ್ರೆ ಶ್ವಾಸಕೋಶದ ಸಮಸ್ಯೆ ಕಾಡುತ್ತದೆ. ಮಕ್ಕಳಿಗೆ ಶ್ವಾಸಕೋಶದ ಜೊತೆಗೆ ಹೃದಯ ಸ್ನಾಯುಗಳಿಗೂ ಸಮಸ್ಯೆಯಾಗಲಿದೆ. ಮಕ್ಕಳಿಗೆ ವ್ಯಾಕ್ಸಿನ್ ಹಾಕುವವರೆಗೂ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.corona-3rd-wave-affect-50-children-child-specialist-dr-n-pradeep-mysore

ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಮಾಸ್ಕ್ ಹಾಕುವುದನ್ನ ಅಭ್ಯಾಸ ಮಾಡಿಸಿ. ಲಾಕ್ಡೌನ್ ಮುಗಿದ ಬಳಿಕವೂ ಜನಸಂದಣಿಯಿಂದ ಮಕ್ಕಳನ್ನು ದೂರವಿಡಿ. ಬಿಸಿನೀರು ಮತ್ತು ಇಮ್ಯುನಿಟಿ ಆಹಾರವನ್ನು ಮಕ್ಕಳಿಗೆ ನೀಡಿ. ಕೊರೋನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿ ಎಂದು ಮಕ್ಕಳ ತಜ್ಞ ಡಾ.ಎನ್.ಪ್ರದೀಪ್ ಸಲಹೆ ನೀಡಿದ್ದಾರೆ.

Key words: Corona- 3rd wave – affect -50% children-Child Specialist -Dr N Pradeep-mysore