ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾಗೆ 14 ಮಂದಿ ಬಲಿ…

ಬೆಂಗಳೂರು,ಜು,22,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಅಟ್ಟಹಾಸ  ಮುಂದುವರೆದಿದ್ದು, ನಿನ್ನೆ ಸಂಜೆಯಿಂದ ಈವರೆಗೆ ಮಹಾಮಾರಿ ಕೊರೊನಾಗೆ 14 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಬೆಂಗಳೂರಿನ ಕೆ.ಸಿ. ಜನರಲ್ ಅಸ್ಪತ್ರೆಯಲ್ಲಿ ಇಬ್ಬರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 70 ವರ್ಷದ ಮಹಿಳೆ, ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಮೂವರು, ಐಸಿಯುನಲ್ಲಿದ್ದ ಇಬ್ಬರು  ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ  ಎನ್ನಲಾಗುತ್ತಿದೆ.corona-14-death-bangalore

ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬೆಂಗಳೂರನ್ನ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ನಿನ್ನೆಗೆ ಲಾಕ್ ಡೌನ್ ಮುಗಿದಿದ್ದು ಇಂದಿನಿಂದ ಬೆಂಗಳೂರು ಅನ್ ಲಾಕ್ ಆಗಿದೆ.

Key words:  Corona –14 death-Bangalore