ಬೆಂಗಳೂರು,ಜನವರಿ,29,2026 (www.justkannada.in): ಟೆಂಡರ್ ಮತ್ತು ಬಿಲ್ ಕ್ಲಿಯರ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘ ಮತ್ತೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ಗುತ್ತಿಗೆದಾರರಿಗೆ ಸರಿಯಾಗಿ ಬಿಲ್ ಕ್ಲಿಯರ್ ಆಗುತ್ತಿಲ್ಲ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಒಂದೇ ಬಾರಿ ಬಿಲ್ ಕ್ಲಿಯರ್ ಮಾಡುವ ಬದಲು ಹಂತಹಂತವಾಗಿ ಕ್ಲಿಯರ್ ಮಾಡಲಿ. ಸಮಸ್ಯೆಗಳ ಕುರಿತು 100 ಪುಟಗಳ ದಾಖಲೆ ಕೊಟ್ಟಿದ್ದೇವೆ ಎಂದರು.
ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಮಾತನಾಡಿ, ಗುತ್ತಿಗೆದಾರರಿಗೆ ಈಗಿನ ಸರ್ಕಾರವೇ ಅನ್ಯಾಯ ಮಾಡುತ್ತಿದೆ. ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಿಂದಲೇ ಅನ್ಯಾಯವಾಗುತ್ತಿದೆ. ಗುತ್ತಿಗೆದಾರರಿಗೆ ಸರಿಯಾಗಿ ಬಿಲ್ ಕ್ಲಿಯರ್ ಆಗುತ್ತಿಲ್ಲ. ಎಲ್ಲಾ ಇಲಾಖೆ ಸಚಿವರಿಂದ ಟೆಂಡರ್ ಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
Key words: Injustice, government, Outrage, contractors association







